Thursday, June 4, 2026
Homeಕರಾವಳಿಮಂಗಳೂರು : ಮಾವನ ಮುಂದೆ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ;ಪತ್ನಿಯಿಂದ ಪೊಲೀಸ್ ಠಾಣೆಗೆ ದೂರು,ಪತಿ...

ಮಂಗಳೂರು : ಮಾವನ ಮುಂದೆ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ;ಪತ್ನಿಯಿಂದ ಪೊಲೀಸ್ ಠಾಣೆಗೆ ದೂರು,ಪತಿ ಬಂಧನ

- Advertisement -
- Advertisement -

ಮಂಗಳೂರು : ಪತ್ನಿಗೆ ಹಲ್ಲೆ ಮಾಡಿ ವರದಕ್ಷಿಣೆಗೆ ಕಿರುಕುಳ ನೀಡಿ ಬಳಿಕ ಮಾವನ ಮುಂದೆ ಮೂರು ಭಾರಿ ತಲಾಖ್ ಹೇಳಿ ಮನೆಯಿಂದ ಹೊರಹಾಕಿರುವ ಮಂಗಳೂರು ಉಳ್ಳಾಲದ ಉಮರಬ್ಬ ಮಗನಾದ ಪತಿ ಮೊಹಮ್ಮದ್ ದಿಲ್ಫಾಝ್ ಎಂವವನ ವಿರುದ್ಧ 23 ವರ್ಷದ ಪತ್ನಿ ದೂರು ನೀಡಿದ್ದು ಅದರಂತೆ (BNS),2003(u/s 85-115(2); DOWRY PROHIBITION ACT 1961(u/s-3,4); THE MUSLIM WOMEN (Protection of rights on marriage)Act,2009(u/s-4) ಅಡಿಯಲ್ಲಿ ಮಂಗಳೂರು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಆರೋಪಿ ಪತಿಯನ್ನು ಬಂಧಿಸಿದ್ದಾರೆ.

ದೂರಿನ ಸಾರಾಂಶ: ದೂರುದಾರರು ಮತ್ತು ಮೊಹಮ್ಮದ್ ದಿಲ್ಫಾಝ್ ಎಂಬಾತನನ್ನು ಪ್ರೀತಿಸಿ ದಿನಾಂಕ 20.04.2019 ರಂದು ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ, ದೂರುದಾರರ ತಂದೆ ದೂರುದಾರರಿಗೆ 22 ಪವನ್ ಚಿನ್ನವನ್ನು ಹಾಕಿದ್ದು, ಮೊಹಮ್ಮದ್ ದಿಲ್ಯಾಝ್ ನು ವಾಚ್ ಖರೀದಿಸಲು ರೂ 50,000/- ಕೇಳಿ ಪಡೆದಿರುತ್ತಾನೆ. ಮದುವೆಯಾದ ಬಳಿಕ ಮೊಹಮ್ಮದ್ ದಿಲ್ಯಾಝ್ ನು ದೂರುದಾರರ ಜೊತೆಯಲ್ಲಿ ಸ್ವಲ್ಪ ಕಾಲ ಚೆನ್ನಾಗಿದ್ದು, ಬಳಿಕ ಅನ್ಯ ಮಹಿಳೆಯರ ಜೊತೆಯಲಿ ಅನೈತಿಕ ಸಂಬಂಧವನ್ನು ಹೊಂದಲು ಪ್ರಾರಂಭಿಸಿದ್ದು, ದೂರುದಾರರು ಈ ವಿಚಾರದ ಬಗ್ಗೆ, ಕೇಳಿದಾಗ ದೈಹಿಕ ಹಲ್ಲೆ, ಪರಿಣಾಮ ಪಿರ್ಯಾದಿದಾರರು ಚಿಕಿತ್ಸೆಯನ್ನು ಪಡೆದುಕೊಂಡಿರುತ್ತಾರೆ, ಈ ಬಗ್ಗೆ ಕುಟುಂಬದ ಹಿರಿಯರು ಪಂಚಾತಿಕೆ ನಡೆಸಿ ದೂರುದಾರರ ಗಂಡನಿಗೆ ಬುದ್ಧಿ ಮಾತನ್ನು ಹೇಳಿದ್ದು, ಆದರೂ ತನ್ನ ಚಾಳಿಯನ್ನು ಮುಂದುವರಿಸಿರುತ್ತಾನೆ. ದಿನಾಂಕ 08.11.2024 ರಂದು ಪಿರ್ಯಾದಿದಾರರ ತಂದೆ ದೂರುದಾರರ ಗಂಡನಲ್ಲಿ ಈ ಬಗ್ಗೆ ವಿಚಾರಿಸಿದ್ದಕ್ಕೆ ಆತನು ರಾತ್ರಿ ಸುಮಾರು 8:45 ಗಂಟೆಗೆ ದೂರುದಾರರಿಗೆ ದೈಹಿಕವಾಗಿ ಹಲೆ,ನಡೆಸಿ ದೂರುದಾರರ ತಂದೆಯನ್ನು ಮನೆಗೆ ಬರಲು ಹೇಳಿ, ತಂದೆಯ ಎದುರಿನಲ್ಲಿ ದೂರುದಾರರಿಗೆ 3 ಬಾರಿ ತಲಾಖ್ ಹೇಳಿ, ಇನ್ನು ಮುಂದಕ್ಕೆ ನೀನು ನನ್ನ ಹೆಂಡತಿಯಲ್ಲ ಎಂದು ಹೇಳಿ ಮನೆಯಿಂದ ಹೊರ ಹಾಕಿರುತ್ತಾನೆ. ದೂರುದಾರರ ಗಂಡನ ತಂದೆಯಾದ ಉಮರಬ್ಬರವರು ಸರಿಯಾದ ವರದಕ್ಷಿಣೆ ಸಿಗಲಿಲ್ಲ ಎಂದು ದೂರುದಾರರಿಗೆ ಆಗಾಗ ಮಾನಸಿಕ ಕಿರುಕುಳ ನೀಡುತ್ತಿದ್ದು, ದೂರುದಾರರ ಅಜ್ಜಿ ದೂರುದಾರರ ಹೆಸರಿನಲ್ಲಿ ಹೂಡಿಕೆ ಮಾಡಿ, ಅದು ಮೆಚೂರ್ಡ್ ಆದ ನಂತರ ಬರುವ 8,00,000/- ರೂ ಹಣವನ್ನು ಗಂಡ ಮತ್ತು ಗಂಡನ ತಂದೆಗೆ ನೀಡಬೇಕೆಂದು ಕಿರುಕುಳ ನೀಡಿರುತ್ತಾರೆ, ದೂರುದಾರರು ತನ್ನ ಸಂಸಾರವನ್ನು ಸರಿಪಡಿಸಬೇಕೆಂದು ಕಾದು ಹಲವು ಬಾರಿ ಪಂಚಾತಿಕೆ ಮಾತುಕತೆಯನ್ನು ಕೂಡಾ ನಡೆಸಿ ಸರಿ ಹೋಗದೇ ಇರುವ ಕಾರಣ ಈ ದಿನ ತಡವಾಗಿ ದೂರು ನೀಡಿರುತ್ತಾರೆ.

- Advertisement -

Latest News

error: Content is protected !!