Monday, May 20, 2024
Homeತಾಜಾ ಸುದ್ದಿಉಟ್ಟ ಸೀರೆಯನ್ನೇ ಬಾಲಕನಿಗೆ ಬಿಚ್ಚಿ ಕೊಟ್ಟು ಮಾನವೀಯತೆ ಮೆರೆದ ಮಹಿಳೆ

ಉಟ್ಟ ಸೀರೆಯನ್ನೇ ಬಾಲಕನಿಗೆ ಬಿಚ್ಚಿ ಕೊಟ್ಟು ಮಾನವೀಯತೆ ಮೆರೆದ ಮಹಿಳೆ

spot_img
- Advertisement -
- Advertisement -

ನಿಡಗುಂದಿ: ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ನೀರಿನಲ್ಲಿ ಬಿದ್ದಿದ್ದ ಬಾಲಕನ ರಕ್ಷಣೆಗಾಗಿ ಮಹಿಳೆಯೊಬ್ಬರು ಸೀರೆಯನ್ನು ಬಿಚ್ಚಿ ಕೊಟ್ಟ ಘಟನೆ ನಡೆದಿದೆ.

ಆಳವಾದ ಕಾಲುವೆ ನೀರಿನಲ್ಲಿ ಬಾಲಕ ಮುಳುಗುತ್ತಿದ್ದು, ಆತನನ್ನು ರಕ್ಷಿಸಲು ಮಹಿಳೆ ಸೀರೆ ಕೊಟ್ಟು ನೆರವಾಗಿದ್ದಾರೆ. 6 ವರ್ಷದ ಬಾಲಕ ಅರವಿಂದ್ ಕಾಲುವೆಯಲ್ಲಿ ಕಾಲುಜಾರಿ ಬಿದ್ದು ಒದ್ದಾಡುತ್ತಿದ್ದ. ವ್ಯಕ್ತಿಯೊಬ್ಬರು ನೀರಿಗೆ ಜಿಗಿದು ಆತನನ್ನು ರಕ್ಷಿಸಲು ಮುಂದಾಗಿದ್ದು ಕಾಲುವೆ ಆಳವಾಗಿದ್ದ ಕಾರಣ ರಕ್ಷಣಾ ಕಾರ್ಯಕ್ಕೆ ತೊಂದರೆಯಾಗಿದೆ.

ಈ ವೇಳೆ ಉಟ್ಟಿದ್ದ ಸೀರೆಯನ್ನು ಬಿಚ್ಚಿ ಒಂದು ತುದಿಯನ್ನು ತಾವು ಹಿಡಿದುಕೊಂಡು ಮತ್ತೊಂದನ್ನು ನೀರಿನಲ್ಲಿದ್ದ ವ್ಯಕ್ತಿ ಮತ್ತು ಬಾಲಕನಿಗೆ ಕೊಟ್ಟಿದ್ದಾರೆ. ಸಿರೆ ಹಿಡಿದುಕೊಂಡ ಬಾಲಕ ಮತ್ತು ವ್ಯಕ್ತಿ ದಡ ತಲುಪಿದ್ದಾರೆ ಎಂದು ಹೇಳಲಾಗಿದೆ.

- Advertisement -
spot_img

Latest News

error: Content is protected !!