Thursday, June 4, 2026
Homeಕರಾವಳಿಮಂಗಳೂರುಸುಳ್ಯ: ಭಾರೀ ಮಳೆಗೆ ಮನೆಯ ಪಕ್ಕದಲ್ಲೇ ನಿರ್ಮಾಣವಾದ ಬೃಹತ್ ಅಪಾಯಕಾರಿ ಗುಂಡಿ

ಸುಳ್ಯ: ಭಾರೀ ಮಳೆಗೆ ಮನೆಯ ಪಕ್ಕದಲ್ಲೇ ನಿರ್ಮಾಣವಾದ ಬೃಹತ್ ಅಪಾಯಕಾರಿ ಗುಂಡಿ

- Advertisement -
- Advertisement -

ಸುಳ್ಯ: ಭಾರೀ ಮಳೆಯಿಂದಾಗಿ ಮನೆಯೊಂದರ ಪಕ್ಕದಲ್ಲೇ ಬೃಹತ್ ಗಾತ್ರದ ಅಪಾಯಕಾರಿ ಗುಂಡಿ ನಿರ್ಮಾಣವಾಗಿರುವ ಘಟನೆ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದಲ್ಲಿ ಸಂಭವಿಸಿದೆ.

ಸಂಪಾಜೆ ಗ್ರಾಮದ ರಾಜಾರಾಂಪುರ ಎಂಬಲ್ಲಿ ಬಾಳಪ್ಪ ಎಂಬುವವರ ಮನೆಯ ಸಮೀಪದಲ್ಲೇ ಮಣ್ಣು ಕುಸಿದು ದೊಡ್ಡ ಗುಂಡಿ ನಿರ್ಮಾಣವಾಗಿದೆ.

ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಸುಮಾರು ಹದಿನೈದು ಫೀಟ್ ಗೂ ಅಧಿಕ ಅಳದ ಗುಂಡಿ ನಿರ್ಮಾಣವಾಗಿದೆ.

ಗುಂಡಿಯ ಒಳಗಿನಿಂದ ನೀರು ಉಕ್ಕಿ ಬರುತ್ತಿದ್ದು, ಹೆದ್ದಾರಿ ಪಕ್ಕದಲ್ಲೇ ಇರುವ ಬಾಳಪ್ಪ ಅವರ ಮನೆ ಅಪಾಯಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಮನೆಯವರನ್ನು ಬೇರೆಡೆಗೆ ಸ್ಥಳಾಂತರಿಸಲು ಜಿಲ್ಲಾಡಳಿತ ಮುಂದಾಗಿದೆ.

- Advertisement -

Latest News

error: Content is protected !!