Wednesday, July 1, 2026
Homeಕರಾವಳಿಮಂಗಳೂರುಬೆಳ್ತಂಗಡಿ;ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಮೊದಲ ರಾಸುವಿನ ಭ್ರೂಣ ವರ್ಗಾವಣೆ ಕರುವಿನ...

ಬೆಳ್ತಂಗಡಿ;ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಮೊದಲ ರಾಸುವಿನ ಭ್ರೂಣ ವರ್ಗಾವಣೆ ಕರುವಿನ ಜನನ: ಪ್ರಥಮ ಪ್ರಯೋಗ ಯಶಸ್ವಿ

- Advertisement -
- Advertisement -

ಬೆಳ್ತಂಗಡಿ; ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ವತಿಯಿಂದ ಕೈಗೊಂಡಿದ್ದ  ರಾಸುವಿನ ಭ್ರೂಣ ವರ್ಗಾವಣೆ ಕಾರ್ಯಕ್ರಮದ ಪ್ರಥಮ ಪ್ರಯೋಗ ಯಶಸ್ವಿಯಾಗಿದೆ. ಈ ಕಾರ್ಯಕ್ರಮಕ್ಕೆ ಅಕ್ಟೋಬರ್ 11 2025 ರಂದು ದ ಕ ಹಾಲು ಒಕ್ಕೂಟದ ಅಧ್ಯಕ್ಷರಾದ ಶ್ರೀ ರವಿರಾಜ್ ಹೆಗ್ಡೆರವರು ಚಾಲನೆ ನೀಡಿದ್ದರು.  ಆ ಪ್ರಯುಕ್ತ ಬಂದಾರು ಹಾಲು ಉತ್ಪಾದಕರ  ಮಹಿಳಾ ಸಹಕಾರಿ ಸಂಘದ ಸದಸ್ಯರಾದ ಶ್ರೀಮತಿ ರೇವತಿ ಗಂಗಯ್ಯ ಪೆಲತ್ತಿ ಮಾರು ಅವರ ಮನೆಯಲ್ಲಿ 2025ರ ಅಕ್ಟೋಬರ್ 12ರಂದು  ರಾಸುವಿನ ಭ್ರೂಣ ವರ್ಗಾವಣೆ ಮಾಡಲಾಗಿತ್ತು. ಯಶಸ್ವಿ ಗರ್ಭಧಾರಣೆಯ ಬಳಿಕ  2026ರ ಜೂನ್ 25ರಂದು ಆರೋಗ್ಯವಂತ ಜರ್ಸಿ ಹೆಣ್ಣು ಕರುವಿನ ಜನನವಾಗಿದೆ.  ಇದು ಜಿಲ್ಲೆಯ ಹೈನುಗಾರಿಕೆ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿದೆ.

ಈ ಕಾರ್ಯಕ್ರಮವು ಉಪ್ಪಿನಂಗಡಿ ಶಿಬಿರ ಕಚೇರಿಯ  ಪಶುವೈದ್ಯರ ಮೇಲುಸ್ತುವಾರಿಯಲ್ಲಿ ಯಶಸ್ವಿಯಾಗಿ ನಡೆಯಿತು.ಭ್ರೂಣ ವರ್ಗಾವಣೆ ಕಾರ್ಯಕ್ರಮದ ಒಟ್ಟು ವೆಚ್ಚ ₹21,000 ಆಗಿದ್ದು, ಇದರಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟ – ₹5,000 ಕರ್ನಾಟಕ ಹಾಲು ಮಹಾಮಂಡಳಿ – ₹10,000, ಕೇಂದ್ರ ಸರ್ಕಾರದ ರಾಷ್ಟ್ರೀಯ ಗೋಕುಲ ಮಿಷನ್ – ₹5,000 ಫಲಾನುಭವಿ ರೈತರಿಂದ – ₹1,000 ಒಟ್ಟು ₹21,000 ವೆಚ್ಚದ ಈ ಯೋಜನೆಯಲ್ಲಿ ಹಸುವಿನ ಗರ್ಭಧಾರಣೆ ಮೂರು ತಿಂಗಳು ಯಶಸ್ವಿಯಾಗಿ ದೃಢಪಟ್ಟ ನಂತರ ಮಾತ್ರ ಫಲಾನುಭವಿ ರೈತರು ತಮ್ಮ ಪಾಲಿನ ₹1,000 ಪಾವತಿಸುತ್ತಾರೆ. ಒಟ್ಟು 25 ರಾಸುಗಳ ಮೇಲೆ ಪ್ರಯೋಗ ನಡೆದಿದ್ದು ಇದರಲ್ಲಿ 5 ಯಶಸ್ವಿಯಾಗಿರುತ್ತದೆ

ಈ ಯೋಜನೆಯು ಉತ್ತಮ ತಳಿಯ ಹಸುಗಳ ಅಭಿವೃದ್ಧಿ, ಹಾಲು ಉತ್ಪಾದನೆ ಹೆಚ್ಚಳ ಹಾಗೂ ರೈತರ ಆದಾಯ ವೃದ್ಧಿಗೆ ನೆರವಾಗಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಗೆ ಹೊಸ ಮೈಲಿಗಲ್ಲಾಗಿದೆ

- Advertisement -

Latest News

error: Content is protected !!