- Advertisement -
- Advertisement -
ಕೊರೊನಾ ಕರಿನೆರಳು ದೇಶಕ್ಕೆ ಮಾರಕವಾಗಿದೆ. ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಇಡೀ ದೇಶವನ್ನೇ ಲಾಕ್ ಡೌನ್ ಮಾಡಿದೆ. ಲಾಕ್ ಡೌನ್ ಸಮಯದಲ್ಲಿ ತುರ್ತು ಸೇವೆ ಹೊರತುಪಡಿಸಿದರೆ ಇನ್ನೆಲ್ಲಾ ಸೇವೆಗಳು ಬಂದ್ ಆಗಿವೆ. ಜೊತೆಗೆ ಮದ್ಯ ಮಾರಾಟ ಕೂಡ ಬಂದ್ ಆಗಿದೆ.
ಹೀಗಾಗಿ ಅದೆಷ್ಟೋ ಮಂದಿ ಮದ್ಯ ಪ್ರಿಯರು ಲಾಕ್ ಡೌನ್ ನಿಂದಾಗಿ ಮದ್ಯವನ್ನು ತ್ಯಜಿಸಿದ್ದಾರೆ. ಅದೆಷ್ಟೋ ಕುಟುಂಬಗಳು ಇದೀಗ ನೆಮ್ಮದಿಯಿಂದ ಇವೆ. ಕುಡಿತದ ಚಟದಿಂದ ತಮ್ಮ ಮನೆಯ ಪುರುಷರು ದೂರ ಇರುವುದರಿಂದ ಮಹಿಳೆಯರು ನೆಮ್ಮದಿಯಿಂದ ಊಟ ಮಾಡುತ್ತಿದ್ದಾರೆ.
ಇದೀಗ ಹೌದು ಹುಲಿಯಾ ಖ್ಯಾತಿಯ ಪೀರಪ್ಪ ಕಟ್ಟಿಮನಿ ಕೂಡ ಕುಡಿತದಿಂದ ದೂರ ಸರಿದಿದ್ದಾರಂತೆ. ಹೀಗಂತ ಅವರೇ ಹೇಳಿಕೊಂಡಿದ್ದಾರೆ. ಲಾಕ್ ಡೌನ್ ನಿಂದಾಗಿ ಮದ್ಯ ಮಾರಾಟ ನಿಂತಿದ್ದು, ನಾನು ಕುಡಿಯುವುದನ್ನು ಬಿಟ್ಟಿದ್ದೇನೆ. ನೆಮ್ಮದಿಯಿಂದ ಮನೆಯಲ್ಲಿ ಊಟ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
- Advertisement -