Tuesday, June 9, 2026
Homeತಾಜಾ ಸುದ್ದಿಹಾಸನದಲ್ಲೊಂದು ಅಮಾನವೀಯ ಘಟನೆ: ಆಂಬ್ಯುಲೆನ್ಸ್ ಸಿಗದೇ ರೋಗಿಯನ್ನು ಸ್ಟ್ರೆಚರ್ ಮೂಲಕ ಕರೆದೊಯ್ದ ಸಂಬಂಧಿಕರು 

ಹಾಸನದಲ್ಲೊಂದು ಅಮಾನವೀಯ ಘಟನೆ: ಆಂಬ್ಯುಲೆನ್ಸ್ ಸಿಗದೇ ರೋಗಿಯನ್ನು ಸ್ಟ್ರೆಚರ್ ಮೂಲಕ ಕರೆದೊಯ್ದ ಸಂಬಂಧಿಕರು 

- Advertisement -
- Advertisement -

ಹಾಸನ: ನಡುರಾತ್ರಿಯಲ್ಲಿ ಆಂಬ್ಯುಲೆನ್ಸ್ ಸಿಗದೇ ರೋಗಿಯನ್ನು ಸಂಬಂಧಿಕರು ಸ್ಟ್ರೆಚರ್ ಮೂಲಕ ಕರೆದೊಯ್ದ ಅಮಾನವೀಯ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಹಾಸನ ನಗರದ ಸಂಪಿಗೆ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸುಮಾರು 500 ಮೀ. ದೂರವಿತ್ತು. ಒಂದು ಖಾಸಗಿ ಆಸ್ಪತ್ರೆಯಿಂದ ಮತ್ತೊಂದು ಖಾಸಗಿ ಆಸ್ಪತ್ರೆಗೆ ರೋಗಿ ಶಿಫ್ಟ್ ಮಾಡುವ ದೃಶ್ಯ ವೈರಲ್ ಆಗಿದ್ದು, ಆಂಬ್ಯುಲೆನ್ಸ್ ಒದಗಿಸದ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ರೋಗಿಯನ್ನು ಸ್ಥಳಾಂತರಿಸಿದ್ದಾರೆ.

ಹೃದಯ ಸಂಬಂಧಿ ಕಾಯಿಲೆಯಿಂದ ಗಂಭೀರ ಸ್ಥಿತಿಯಲ್ಲಿದ್ದರು. ಆದರೂ ತುರ್ತು ನೆರವು ದೊರೆತಿರಲಿಲ್ಲ. ಆಂಬ್ಯುಲೆನ್ಸ್ ತುಂತುರು ಮಳೆಯ ನಡುವೆಯೇ ರೋಗಿಯನ್ನು ಶಿಫ್ಟ್ ಮಾಡಿದ್ದಾರೆ. ಇನ್ನು ಈ ಹೃದಯ ವಿದ್ರಾವಕ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅಮಾನವೀಯವಾಗಿ ವರ್ತಿಸಿರುವ ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಮೊಬೈಲ್‍ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ. ದೃಶ್ಯ ಸೆರೆ ಹಿಡಿಯದಂತೆ ರೋಗಿಯ ಮನೆಯವರ ಮನವಿ ಮಾಡಿದ್ದಾರೆ. ಕಳೆದ ಎರಡು ದಿನದ ಹಿಂದೆ ಈ ಘಟನೆ ನಡೆದಿದೆ.

- Advertisement -

Latest News

error: Content is protected !!