Tuesday, June 30, 2026
Homeಕರಾವಳಿಚಿಕ್ಕಮಗಳೂರು:ಹನಿ ಟ್ರ್ಯಾಪ್‌ ಮಾಡುತ್ತಿದ್ದ ಕಿರಾತಕ ಗ್ಯಾಂಗ್ ಅಂದರ್!

ಚಿಕ್ಕಮಗಳೂರು:ಹನಿ ಟ್ರ್ಯಾಪ್‌ ಮಾಡುತ್ತಿದ್ದ ಕಿರಾತಕ ಗ್ಯಾಂಗ್ ಅಂದರ್!

- Advertisement -
- Advertisement -

ಚಿಕ್ಕಮಗಳೂರು: ಇಬ್ಬರನ್ನು ‘ಹನಿ ಟ್ರ್ಯಾಪ್‌’ ಖೆಡ್ಡಾಕ್ಕೆ ಬೀಳಿಸಿ, ನಂತರ ‘ಪೊಲೀಸ್‌’ ಸೋಗಿನಲ್ಲಿ ಬೆದರಿಕೆಯೊಡ್ಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಜಾಲವನ್ನು ಭೇದಿಸಿ 13 ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಜಾಲವನ್ನು ಭೇದಿಸಿದ್ದಾರೆ. ಏಳು ಪುರುಷರು, ಆರು ಮಹಿಳೆಯರನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ ₹ 40 ಸಾವಿರ ನಗದು, ಆಟೊರಿಕ್ಷಾ, ದ್ವಿಚಕ್ರವಾಹನ, ಮೂರು ಕಾರು, 17 ಮೊಬೈಲ್‌ ಫೋನ್‌, 24 ಸಿಮ್‌ ಕಾರ್ಡ್‌ ವಶಪಡಿಸಿಕೊಳ್ಳಲಾಗಿದೆ.

ಚಿಕ್ಕಮಗಳೂರು ನಗರದ ವ್ಯಕ್ತಿಯೊಬ್ಬರಿಗೆ ಪರಿಚಿತ ಮಹಿಳೆಯೊಬ್ಬಳು ದೂರುವಾಣಿ ಕರೆ ಮಾಡಿ ಆಸ್ಪತ್ರೆಗೆ ತುರ್ತಾಗಿ ತೆರಳಲು 10 ಸಾವಿರ ರೂ.ಹಣ ಕೇಳಿದ್ದಾರೆ. ಇದನ್ನು ಸತ್ಯ ಎಂದು ನಂಬಿದ ವ್ಯಕ್ತಿ ಮಹಿಳೆ ಹೇಳಿದ ಮನೆಗೆ ಹೋಗಿ ಹಣ ನೀಡಲು ಮುಂದಾಗಿದ್ದರು. ಆ ವ್ಯಕ್ತಿ ಸ್ನೇಹಿತರ ಜೊತೆ ಮಹಿಳೆ ಹೇಳಿದ ಮನೆಗೆ ತೆರಳಿ ಅಲ್ಲಿದ್ದವರೊಂದಿಗೆ ಮಾತನಾಡುತ್ತಿದ್ದ ವೇಳೆ 5 ಜನ ಬಂದು ಬೆದರಿಸಿ ಹಲ್ಲೆ ನಡೆಸಿದ್ದಾರೆ.

ಇದು ವೇಶ್ಯಾವಾಟಿಕೆಯ ಮನೆ ಹೇಳಿ ಇಬ್ಬರ ಮೇಲೆ ಹಲ್ಲೆ ಮಾಡಿದ್ದು, ಅವರ ಬಳಿ ಇದ್ದ ₹ 75 ಸಾವಿರ ನಗದು ಕಿತ್ತುಕೊಂಡು, ಬಟ್ಟೆ ಬಿಚ್ಚಿಸಿದ್ದಾರೆ. ಮನೆಯಲ್ಲಿದ್ದ ಇಬ್ಬರು ಮಹಿಳೆಯರು ಬೆತ್ತಲೆಯಾಗಿ ಅವರ ಜತೆ ಮಲಗಿಕೊಂಡಿದ್ದಲ್ಲದೆ ಮತ್ತೊಬ್ಬ ಅದನ್ನು ವಿಡಿಯೋ ಮಾಡಿದ್ದಾನೆ.ನಾವು ‘ಪೊಲೀಸರು’ ನಿಮ್ಮನ್ನು ಬಂಧಿಸಿ ಕರೆದೊಯ್ಯುತ್ತೇವೆ, ₹ 20 ಲಕ್ಷ ಕೊಟ್ಟರೆ ಬಿಡುತ್ತೇವೆ. ಇಲ್ಲದಿದ್ದರೆ ವಿಡಿಯೊ ವೈರಲ್‌ ಮಾಡುತ್ತೇವೆ ಎಂದು ಇಬ್ಬರಿಗೂ ಬೆದರಿಕೆಯೊಡ್ಡಿದ್ದಾರೆ.ಇವರ ಬೆದರಿಕೆಗೆ ಹೆದರಿ ಎರಡು ಲಕ್ಷ ಕೊಡುವುದಾಗಿ ಒಪ್ಪಿಕೊಂಡಿದ್ದು, ಇಬ್ಬರಿಗೂ ಬಟ್ಟೆ ತೊಡಿಸಿಕೊಂಡು ಕಾರಿನಲ್ಲಿ ಎಟಿಎಂ ಹತ್ತಿರ ಕೆರೆದೊಯಿದು ₹ 25 ಸಾವಿರ ಡ್ರಾ ಮಾಡಿಸಿಕೊಂಡಿದ್ದಾರೆ. ಸಂಜೆಯೊಳಗೆ ಒಂದು ಲಕ್ಷ ನೀಡಬೇಕು, ವಿಚಾರ ಯಾರಿಗಾದರೂ ಹೇಳಿದರೆ ವಿಡಿಯೊ ವೈರಲ್‌ ಮಾಡುವುದಾಗಿ ಹೆದರಿಸಿದ್ದಾರೆ. ಈ ವೇಳೆ ವಂಚನೆಗೊಳಗಾದ ವ್ಯಕ್ತಿಗೆ ಇದು ಹನಿಟ್ರ್ಯಾಪ್ ಎಂದು ಗೊತ್ತಾಗಿದ್ದು, ಧೈರ್ಯ ಮಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!