ವಿಟ್ಲ; ರಾಜ್ಯದಾದ್ಯಂತ ಸುದ್ದಿಯಾಗಿದ್ದ ವಿಟ್ಲದ ಹಾನಿ ಟ್ರ್ಯಾಪ್ ಪ್ರಕರಣದ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.
ಕೇರಳ ಮೂಲದ ನಿವಾಸಿ ಅರಬ್ ರಾಷ್ಟ್ರದಲ್ಲಿ ಉದ್ಯೋಗಿಯಾಗಿದ್ದ ಅಶ್ರಫ್ ಎಂಬಾತನನ್ನು ಹನಿ ಟ್ರ್ಯಾಪ್ ನಡೆಸಿ 45 ಲಕ್ಷ ಸುಲಿಗೆ ಮಾಡಿದ್ದಾರೆ ಎಂದು ಕಡಂಬು ಬಶೀರ್, ಮಾಣಿ ಸೆಫಿಯಾ, ಸರಪುದ್ಧೀನ್ ಸಹಿತ ಆರು ಜನರ ವಿರುದ್ಧ ವಿಟ್ಲ ಠಾಣೆಯಲ್ಲಿ ಅ ಕ್ರಂ:145/2025ರಂತೆ ಪ್ರಕರಣ ದಾಖಲಾಗಿತ್ತು.
ಇದೀಗ ಹನಿ ಟ್ರ್ಯಾಪ್ ಪ್ರಕರಣದ ಆರೋಪಿಗಳಾದ ಕಡಂಬು ಬಶೀರ್, ಮಾಣಿ ಸೆಫಿಯಾ, ಸರಪುದ್ಧೀನ್ ಗೆ ಎರಡನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಇನ್ನು ಆರೋಪಿ ವಕೀಲರಾದ ಚೇತನಾ ಶೆಟ್ಟಿ ದಂಡೆ ಪರ ವಾದ ಮಂಡಿಸಿದರು. ಹನಿ ಟ್ರ್ಯಾಪ್ ಸಂತ್ರಸ್ತ ಅಶ್ರಫ್ ಪರ ಖಾಸಗಿ ವಕೀಲರಿಂದಲೂ ವಾದ ಮಂಡನೆ ನಡೆಯಿತು. ಈ ವೇಳೆ ಆರೋಪಿಗಳ ಪರವಾದ ವಕೀಲರಾದ ಚೇತನಾ ಶೆಟ್ಟಿ ಅವರ ವಾದವನ್ನು ನ್ಯಾಯಾಲಯ ಪುರಸ್ಕರಿಸಿ ಜಾಮೀನು ಮಂಜೂರು ಮಾಡಿದೆ. ನ್ಯಾಯಾಲಯ ನೀಡಿದ ನಿರೀಕ್ಷಣಾ ಜಾಮೀನಿನಿಂದಾಗಿ ಬಂಧನ ಭೀತಿಯಲ್ಲಿದ್ದ ಗ್ಯಾಂಗ್ ಇದೀಗ ನಿಟ್ಟುಸಿರು ಬಿಟ್ಟಿದೆ


