Wednesday, July 15, 2026
Homeಕರಾವಳಿಉಡುಪಿಉಡುಪಿ: ಬೈಂದೂರು ಮತ್ತು ಹೆಬ್ರಿ ತಾಲೂಕುಗಳಿಗೆ ರಜೆ ಘೋಷಣೆ; ಜೋಮ್ಲು ತೀರ್ಥ ಮುಳುಗಡೆ

ಉಡುಪಿ: ಬೈಂದೂರು ಮತ್ತು ಹೆಬ್ರಿ ತಾಲೂಕುಗಳಿಗೆ ರಜೆ ಘೋಷಣೆ; ಜೋಮ್ಲು ತೀರ್ಥ ಮುಳುಗಡೆ

- Advertisement -
- Advertisement -

ಉಡುಪಿ: ಭಾರೀ ಮಳೆಯ ಕಾರಣ ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಬೈಂದೂರು ಹಾಗೂ ಹೆಬ್ರಿ ತಾಲೂಕುಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ.

ಎರಡು ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.

ಇನ್ನು ಧಾರಕಾರ ಮಳೆಯಿಂದಾಗಿ ಹೆಬ್ರಿ ಸಮೀಪದ ಜೋಮ್ಲು ತೀರ್ಥ ಮುಳುಗಡೆಯಾಗಿದ್ದು, ಶ್ರೀ ಬೊಬ್ಬರ್ಯ
ದೈವಸ್ಥಾನ ಮುಳುಗುವ ಭೀತಿ ಎದುರಾಗಿದೆ.

ಪ್ರವಾಸಿಗರು ಮತ್ತು ಭಕ್ತರು ಜೋಮ್ಲು ತೀರ್ಥ ವೀಕ್ಷಣೆ ಆಗಮಿಸದಂತೆ ಅರಣ್ಯ ಸಿಬ್ಬಂದಿಗಳು ಮನವಿ ಮಾಡಿದ್ದು, ಸೀತಾ ನದಿ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ಪ್ರವಾಸಿಗರಿಗೆ ನದಿಯ ಪಕ್ಕದಲ್ಲಿ ನಿರ್ಬಂಧ ವಿಧಿಸಿರುವ ಬೋರ್ಡ್ ಅಳವಡಿಸಲಾಗಿದೆ.

- Advertisement -

Latest News

error: Content is protected !!