Wednesday, June 3, 2026
Homeತಾಜಾ ಸುದ್ದಿಬಂಟ್ವಾಳ: ಪಾದಚಾರಿ ಮಹಿಳೆಗೆ ಅಪರಿಚಿತ ಬೈಕ್ ಢಿಕ್ಕಿ ಹೊಡೆದು ಪರಾರಿ- ಮಹಿಳೆ ಸಾವು

ಬಂಟ್ವಾಳ: ಪಾದಚಾರಿ ಮಹಿಳೆಗೆ ಅಪರಿಚಿತ ಬೈಕ್ ಢಿಕ್ಕಿ ಹೊಡೆದು ಪರಾರಿ- ಮಹಿಳೆ ಸಾವು

- Advertisement -
- Advertisement -

ಬಂಟ್ವಾಳ: ಪಾದಚಾರಿ ಮಹಿಳೆಗೆ ಅಪರಿಚಿತ ಬೈಕ್ ಢಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ನಡೆದಿದ್ದು, ಪಾದಚಾರಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನಲ್ಲಿ ಮಂಗಳವಾರ ಸಂಜೆ ಘಟನೆ ವರದಿಯಾಗಿದೆ.

ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣ ಮುಂಭಾಗದಲ್ಲಿ ಮಹಿಳೆ ನಿಂತಿದ್ದರು. ಬಸ್ ನಿಲ್ದಾಣದ ಮುಂಭಾಗದ ರಸ್ತೆ ದಾಟವ ಹಿನ್ನೆಲೆಯಲ್ಲಿ ಮಹಿಳೆ ನಿಂತಿದ್ದರು ಎನ್ನುವ ಮಾಹಿತಿ ಇದೆ. ಈ ವೇಳೆ ಮಂಗಳೂರು ಕಡೆಯಿಂದ ಬಂದ ಅಪರಿಚಿತ ಬೈಕೊಂದು ಢಿಕ್ಕಿ ಹೊಡೆದು ಬಳಿಕ ಪರಾರಿಯಾಗಿದೆ. ಈ ವೇಳೆ ರಸ್ತೆಗೆಸೆಯಲ್ಪಟ್ಟ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಘಟನೆಗೆ ಕಾರಣವಾದ ಬೈಕ್ ಹಾಗೂ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಮುಂದುವರೆಸಿದ್ದಾರೆ.

ಈ ಬಗ್ಗೆ ಮೆಲ್ಕಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!