Thursday, June 4, 2026
Homeಕರಾವಳಿಉಡುಪಿಉಡುಪಿ: ಹಿಟ್ ಅಂಡ್ ರನ್ ಕೇಸ್‌, ಮೆಡಿಕಲ್ ಶಾಪ್ ಮಾಲೀಕ ಸಾವು

ಉಡುಪಿ: ಹಿಟ್ ಅಂಡ್ ರನ್ ಕೇಸ್‌, ಮೆಡಿಕಲ್ ಶಾಪ್ ಮಾಲೀಕ ಸಾವು

- Advertisement -
- Advertisement -

ಉಡುಪಿ: ಇಂದು ಬೆಳಿಗ್ಗೆ ಕಡಿಯಾಳಿ ಬಳಿ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಮೆಡಿಕಲ್ ಶಾಪ್ ಮಾಲೀಕರು ಸಾವನ್ನಪ್ಪಿದ್ದಾರೆ.

ಪರ್ಕಳದ ವಾಮನ್ ನಾಯಕ್ ಮೃತರು. ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಉಡುಪಿಯಿಂದ ಪರ್ಕಳಕ್ಕೆ ತೆರಳುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ.

ವಿದ್ಯಾರ್ಥಿಯೊಬ್ಬ ಕಾರು ಚಲಾಯಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಕೂಡಲೇ ಪೊಲೀಸರು ಕಾರು ಮತ್ತು ಚಾಲಕನನ್ನು ಪತ್ತೆ ಹಚ್ಚಿ ಠಾಣೆಗೆ ಕರೆತಂದಿದ್ದಾರೆ.

ತಲೆಗೆ ಗಂಭೀರ ಗಾಯಗೊಂಡ ವಾಮನ್ ನಾಯಕ್ ಅವರನ್ನು ತಕ್ಷಣ ಅಜ್ಜರಕಾಡಿನ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅಲ್ಲಿಂದ ಮಣಿಪಾಲದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಅದಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಅವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಈ ಸಂಬಂಧ ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!