Thursday, June 4, 2026
Homeಕರಾವಳಿಬಂಟ್ವಾಳ; ಹಿಟ್ ಆಂಡ್ ರನ್ ಪ್ರಕರಣ; ಆಂಧ್ರಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು

ಬಂಟ್ವಾಳ; ಹಿಟ್ ಆಂಡ್ ರನ್ ಪ್ರಕರಣ; ಆಂಧ್ರಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಬಂಟ್ವಾಳ; ಪಾದಾಚಾರಿಗೆ ಡಿಕ್ಕಿ ಹೊಡೆದು ಸಾವಿಗೆ ಕಾರಣನಾಗಿ, ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಟ್ರಾಫಿಕ್ ಪೋಲೀಸರು ಆಂಧ್ರಪ್ರದೇಶದದ ಕಡಪ ಎಂಬಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಈತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ತಮಿಳುನಾಡು ಮೂಲದ ಪೆರಂಬದೂರು ಜಿಲ್ಲೆಯ ವೇಪನ್ ತಾಲೂಕಿನ ಪೆರಿಯಾ ವಡಗರೈ ನಿವಾಸಿ ಪರಮಶಿವಂ‌ ಅವರ ಮಗ ಸೆಲ್ವರಾಜ್ ಬಂಧಿತ ಆರೋಪಿ. ಈತ ಟ್ಯಾಂಕರ್ ಚಾಲಕನಾಗಿದ್ದು, ಈತ 2017 ರಲ್ಲಿ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಯ ಬಿಸಿರೋಡು ಕೈಕಂಬದ ರಸ್ತೆ ಬದಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವನಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಮೃತಪಟ್ಟಿದ್ದ. ಬಳಿಕ ಸೆಲ್ವರಾಜ್ ಎಸ್ಕೇಪ್ ಆಗಿದ್ದ,

ಇದೀಗ ಆರೋಪಿ ಯನ್ನು ಟ್ರಾಫಿಕ್ ಎಸ್.ಐ.ಮೂರ್ತಿ ಅವರ ಮಾರ್ಗದರ್ಶನ ದಲ್ಲಿ ಸಿಬ್ಬಂದಿ ದೇವದಾಸ್ ಹಾಗೂ ರಾಜು ಅವರು ಆಂಧ್ರಪ್ರದೇಶದಿಂದ ಬಂಧಿಸಿ ಕರೆ ತಂದಿದ್ದಾರೆ.

- Advertisement -

Latest News

error: Content is protected !!