Monday, May 13, 2024
Homeತಾಜಾ ಸುದ್ದಿಮಸೀದಿಗೆ 1.5 ಕೋಟಿಗೂ ಹೆಚ್ಚು ಮೌಲ್ಯದ ಭೂಮಿ ದೇಣಿಗೆ ನೀಡಿದ ಹಿಂದೂ ಸಹೋದರಿಯರು

ಮಸೀದಿಗೆ 1.5 ಕೋಟಿಗೂ ಹೆಚ್ಚು ಮೌಲ್ಯದ ಭೂಮಿ ದೇಣಿಗೆ ನೀಡಿದ ಹಿಂದೂ ಸಹೋದರಿಯರು

spot_img
- Advertisement -
- Advertisement -

ಉತ್ತರಾಖಂಡ: ದೇಶದಲ್ಲಿ ಹಿಜಾಬ್, ಅಜಾನ್ ಹೀಗೆ ದಿನಕ್ಕೊಂದು ರೀತಿಯಲ್ಲಿ ವಿವಾದ ಹುಟ್ಟಿಕೊಂಡು ಜನ ದ್ವೇಷ ಅಸೂಯೆಗಳ ಮಧ್ಯೆ ಬದುಕುತ್ತಿರುವಾಗ ಹಿಂದೂ ಸಹೋದರಿಯರಿಬ್ಬರು ಕೋಮು ಸೌಹಾರ್ದತೆಯ ಸಂದೇಶ ಸಾರುವ ಕೆಲಸವೊಂದನ್ನು ಮಾಡಿದ್ದಾರೆ.
ತಮ್ಮ ತಂದೆಯ ಕೊನೆಯ ಆಸೆಯನ್ನು ಈಡೇರಿಸುವ ಸಲುವಾಗಿ ಸಹೋದರಿಯರಿಬ್ಬರು ಈದ್ಗಾ ಮಸೀದಿಗೆ 1.5 ಕೋಟಿಗೂ ಹೆಚ್ಚು ಮೌಲ್ಯದ ಭೂಮಿ ದೇಣಿಗೆ ನೀಡಿದ್ದಾರೆ.
ಉತ್ತರಾಖಂಡದ ಉಧಮ್ ಸಿಂಗ್ ನಗರ ನಿವಾಸಿಗಳಾಗಿರುವ ಸದ್ಯ ದೆಹಲಿ ಮತ್ತು ಮೀರತ್‌ನಲ್ಲಿ ವಾಸವಿರುವ ಇಬ್ಬರು ಪುತ್ರಿಯರಾದ ಸರೋಜ್ ಮತ್ತು ಅನಿತಾ ಅವರು ಇತ್ತೀಚೆಗೆ ತಮ್ಮ ಭೂಮಿಯನ್ನು ಮಸೀದಿಗೆ ದಾನ ನೀಡುವ ಮೂಲಕ ತಂದೆಯ ಕೊನೆಯ ಆಸೆಯನ್ನು ಈಡೇರಿಸಿದ್ದಾರೆ.
ಕಾಶಿಪುರದಲ್ಲಿ 20 ವರ್ಷಗಳ ಹಿಂದೆ ನಿಧನರಾದ ಬ್ರಜನಂದನ್ ಪ್ರಸಾದ್ ರಸ್ತೋಗಿ ಅವರು ತಮ್ಮ ಕೃಷಿ ಭೂಮಿಯಲ್ಲಿ ಕೆಲವು ಭಾಗವನ್ನು ಈದ್ಗಾ ವಿಸ್ತರಣೆಗಾಗಿ ದಾನ ಮಾಡಲು ಬಯಸುವುದಾಗಿ ತಮ್ಮ ನಿಕಟ ಸಂಬಂಧಿಗಳಿಗೆ ತಿಳಿಸಿದ್ದರು. ಅದರಂತೆ ತಮ್ಮ ಕೊನೆಯ ಆಸೆಯನ್ನು ತಮ್ಮ ಮಕ್ಕಳೊಂದಿಗೆ ಹಂಚಿಕೊಳ್ಳುವ ಮೊದಲು, ಅವರು ಜನವರಿ 2003 ರಲ್ಲಿ ನಿಧನರಾಗಿದ್ದರು. ಇದೀಗ ತಂದೆಯ ಕೊನೆಯ ಆಸೆಯನ್ನು ತಿಳಿದ ಮಕ್ಕಳು ಅದನ್ನು ಈಡೇರಿಸಿದ್ದಾರೆ.

- Advertisement -
spot_img

Latest News

error: Content is protected !!