Wednesday, June 3, 2026
Homeಕರಾವಳಿಮೂಡಬಿದರೆ: ಕ್ಯಾನ್ಸರ್ ಪೀಡಿತರಿಗೆ ತನ್ನ ಕೂದಲು ದಾನ ಮಾಡಿದ ಪುಟಾಣಿ ಪೋರಿ

ಮೂಡಬಿದರೆ: ಕ್ಯಾನ್ಸರ್ ಪೀಡಿತರಿಗೆ ತನ್ನ ಕೂದಲು ದಾನ ಮಾಡಿದ ಪುಟಾಣಿ ಪೋರಿ

- Advertisement -
- Advertisement -

ಮೂಡಬಿದರೆ: ಕ್ಯಾನ್ಸರ್ ಪೀಡಿತರಿಗೆ ನೋವಿಗೆ ಸ್ಪಂದಿಸಿದ ಮೂಡಬಿದರೆಯ ಪಡಮಾರ್ನಾಡು ನಿವಾಸಿ 9ರ ಹರೆಯ ಪುಟಾಣಿ ಬಾಲಕಿ ತನ್ನ ಕೂದಲು ದಾನ ಮಾಡಿದ್ದಾಳೆ.
ಮೂಡಬಿದರೆಯ ಪಡಮಾರ್ನಾಡು ನಿವಾಸಿ ಲೋಹಿತ್ ಎಸ್ ಹಾಗೂ ಟೆಸ್ಲಿನಾ ದಂಪತಿಯ ಪುತ್ರಿ ತಾನಿಯಾ ತನ್ನ ಉದ್ದ ಕೂದಲು ಕತ್ತರಿಸಿ ಹ್ಯುಮಾನಿಟಿ ಸಂಸ್ಥೆಯ ರೋಶನ್ ಬೆಳ್ಮಣ್ ಅವರು ಕೈಗೊಂಡಿರುವ ಕೇಶ ದಾನ ಮಹಾ ಯೋಜನೆಗೆ ದಾನವಾಗಿ ನೀಡಿದ್ದಾರೆ.
ಇತ್ತೀಚೆಗಷ್ಟೇ ತಾನಿಯಾ ಚಿಕ್ಕಮ್ಮ ಕ್ಯಾರಲ್ ಅವರು ಕ್ಯಾನ್ಸರ್ ಪೀಡಿತರಿಗಾಗಿ ತಮ್ಮ ಕೇಶವನ್ನು ನೀಡಿದ್ದರು. ಇದರಿಂದ ಪ್ರೇರಿತಳಾದ ತಾನಿಯಾ ಕೂಡ ತನ್ನ ಕೂದಲನ್ನು ದಾನ ಮಾಡಿದ್ದಾಳೆ.

- Advertisement -

Latest News

error: Content is protected !!