Saturday, May 18, 2024
Homeಕರಾವಳಿಬಜ್ಪೆ ಪೊಲೀಸ್ ಠಾಣೆಯಲ್ಲಿ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣ : ಠಾಣಾಧಿಕಾರಿಯ ವಿರುದ್ಧ ಕೊಲೆ...

ಬಜ್ಪೆ ಪೊಲೀಸ್ ಠಾಣೆಯಲ್ಲಿ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣ : ಠಾಣಾಧಿಕಾರಿಯ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲು ಅಖಿಲ ಭಾರತ ಹಿಂದು ಮಹಾಸಭಾ ಆಗ್ರಹ

spot_img
- Advertisement -
- Advertisement -

ಮಂಗಳೂರು : ಬಜ್ಪೆ ಪೊಲೀಸ್ ಠಾಣೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣಾಧಿಕಾರಿ ವಿರುದ್ದ ಕೊಲೆಯತ್ನ ದಾಖಲಿಸಬೇಕು ಹಾಗೂ ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಅಖಿಲ ಭಾರತ ಹಿಂದು ಮಹಾಸಭಾ ಆಗ್ರಹಿಸಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ಧರ್ಮೇಂದ್ರ, ಹಿಂದೂ ಕಾರ್ಯಕರ್ತ ಎಂಬ ಕಾರಣಕ್ಕೆ ಮತಾಂಧ ಠಾಣಾಧಿಕಾರಿ ಹಲ್ಲೆ ನಡೆಸಿರುವುದು ಅಮಾನುಷವಾಗಿದ್ದು,  ಠಾಣಾಧಿಕಾರಿ ಅಲ್ಲದೆ ಇತರ ಪೊಲೀಸ್ ಸಿಬ್ಬಂದಿಯನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದದ್ದಾರೆ.  ಅಧಿಕಾರದಲ್ಲಿ ಕಾಂಗ್ರೆಸ್ ಇದ್ದಿದ್ದರೆ ವಿಚಾರವೇ ಬೇರೆಯದ್ದಾಗಿರುತ್ತಿತ್ತು. ಸರಕಾರ ಬಿಜೆಪಿ ಆಗಿರುವುದರಿಂದ ಹಿಂದೂಗಳು ಸಹನೆಯಿಂದಿದ್ದಾರೆ. ಇದರಿಂದ ಬಿಜೆಪಿ ಗೋಸಂಬಿತನ ಅರ್ಥವಾಗುತ್ತದೆ ಎಂದು ಧರ್ಮೇಂದ್ರ ಹೇಳಿದ್ದಾರೆ.

ಪೊಲೀಸ್ ಕಮಿಷನರ್ ಯಾಕೆ ಮೌನವಾಗಿದ್ದಾರೆ ಅರ್ಥವಾಗುತ್ತಿಲ್ಲ. ಆರೋಪಿ ಠಣಾಧಿಕಾರಿ ಗೋಸಾಟದಾರರ ಜತೆಗೂ ನಿಕಟ ಸಂಪರ್ಕ ಹೊಂದಿದ್ದಾರೆಂದು ತಿಳಿದು ಬಂದಿದೆ. ಭವಿಷ್ಯದಲ್ಲಿ ಇಂತಹ ಮನಸ್ಥಿತಿ ಯವರು ಸರಕಾರಿ ಸೇವೆಯಲ್ಲಿ ಮುಂದುವರಿದರೆ ಅನಾಹುತ ಕಟ್ಟಿಟ್ಟ ಬುತ್ತಿ ಎಂದು ಧರ್ಮೇಂದ್ರ ಎಂದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಕೋಮು ಸೂಕ್ಷ್ಮ ಪ್ರದೇಶವಾದರೂ ಪೊಲೀಸ್ ಠಾಣೆಗಳಲ್ಲಿ ಇದುವರೆಗೆ ಇಂತಹ ಘಟನೆಗಳು ನಡೆದಿರುವುದಿಲ್ಲ, ಆದರೆ ಬಜೈ ಠಾಣೆ ಇನ್ಸೆಕ್ಟರ್ ಮತ್ತು ಸಿಬ್ಬಂದಿ ಅನ್ಯ ಕೋಮಿನವರಾಗಿದ್ದು, ಹಿಂದೂ ಕಾರ್ಯಕರ್ತ’ ಎಂಬ ಕಾರಣಕ್ಕಾಗಿ ದ್ವೇಷ ಸಾಧಿಸಿರುವುದು ಅತ್ಯಂತ ಅಮಾನುಷ . ಈ ಎಲ್ಲಾ ಬೆಳವಣಿಗೆಯ ನ್ನು ಗಮನಿಸುವಾಗ ಈ ಕೃತ್ಯದ ಹಿಂದೆ ಯಾವುದೋ ಸಮಾಜ ಘಾತುಕ ಶಕ್ತಿ ಈ ಮೇಲೆ ತಿಳಿಸಿದಂತಹ ಪೊಲೀಸರ ಜೊತೆ ಸೇರಿಕೊಂಡು ಕೆಲಸ ಮಾಡುತ್ತಿದೆ . ಇಂತಹ ಗೂಂಡಾ ಪ್ರವೃತ್ತಿಯ ಪೊಲೀಸರಿಂದ ರಾಜ್ಯದ ಪೊಲೀಸ್ ಇಲಾಖೆ ತಲೆತಗ್ಗಿಸುವಂತಾಗಿದೆ. ಕೆಲವು ಪೋಲೀಸರನ್ನು ವಿಚಾರಣೆ ಯ ಸಲುವಾಗಿ ಅಮಾನತು ಮಾಡಿರುವ ಮಂಗಳೂರು ಕಮಿಷನರ್ ಶಶಿ ಕುಮಾರ್ ರವರ ನಡೆಯನ್ನು ಹಿಂದೂ ಮಹಾಸಭಾ ಸ್ವಾಗತಿಸುತ್ತದೆ ಎಂದರು. ಇದೇ ಸಂದರ್ಭದಲ್ಲಿ ಮುಖಂಡರಾದ ಪ್ರಮೋದ್ ಉಚ್ಚಿಲ್, ಹರ್ಷ ನಾಯಕ್ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!