Friday, April 19, 2024
Homeಅಪರಾಧಶಿವ ಪಾರ್ವತಿ ವೇಷಧಾರಿಗಳ ಕೈಯ್ಯಲ್ಲಿ ಸಿಗರೇಟ್; ಮತ್ತೆ ಹಿಂದೂ ದೇವರ ಅವಹೇಳನಕಾರಿ ಪೋಸ್ಟ್ ಮಾಡಿದ ನಿರ್ದೇಶಕಿ...

ಶಿವ ಪಾರ್ವತಿ ವೇಷಧಾರಿಗಳ ಕೈಯ್ಯಲ್ಲಿ ಸಿಗರೇಟ್; ಮತ್ತೆ ಹಿಂದೂ ದೇವರ ಅವಹೇಳನಕಾರಿ ಪೋಸ್ಟ್ ಮಾಡಿದ ನಿರ್ದೇಶಕಿ ಲೀನಾ ಮಣಿಮೇಕ

spot_img
- Advertisement -
- Advertisement -

ನಿರ್ದೇಶಕಿ ಲೀನಾ ಮಣಿಮೇಕಲೈ ಕೆಲವೇ ದಿನಗಳ ಹಿಂದೆ ತಮ್ಮ ಮುಂದಿನ ಚಿತ್ರಕ್ಕೆ ಸಂಬಂಧಿಸಿದಂತೆ ಕಾಳಿ ದೇವಿಯ ಪೋಸ್ಟರ್ ಹಂಚಿಕೊಂಡಿದ್ದು ಭಾರೀ ವಿವಾದವಾಗಿತ್ತು. ಅವಹೇಳನಕಾರಿಯಾಗಿ ಕಾಳಿ ದೇವಿಯನ್ನು ಚಿತ್ರಿಸಲಾಗಿದೆ ಎಂಬ ಆರೋಪ ಎದುರಾದ ಬೆನ್ನಲ್ಲೇ ಟ್ವಿಟರ್‌ನಿಂದ ಆ ಪೋಸ್ಟರ್ ಅನ್ನು ತಡೆ ಹಿಡಿಯಲಾಯಿತು. ಇದೀಗ ಲೀನಾ ಮಣಿಮೇಕಲೈ ಅವರು ಈಗ ಶಿವ ಮತ್ತು ಪಾರ್ವತಿ ವೇಷಧಾರಿಗಳು ಧೂಮಪಾನ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದು ಮತ್ತೆ ವಿವಾದಕ್ಕೆ ಕಾರಣ ಆಗಿದೆ.


ನೆಟ್ಟಿಗರು ಈ ಪೋಸ್ಟ್‌ಗೆ ವಿರೋಧ ವ್ಯಕ್ತಪಡಿಸಿದ್ದು, ಪ್ರಚಾರಕ್ಕಾಗಿಯೇ ಲೀನಾ ಮಣಿಮೇಕಲೈ ಅವರು ಈ ರೀತಿ ಮಾಡುತ್ತಿದ್ದಾರೆ ಎಂದು ಅವರನ್ನು ನೆಟ್ಟಿಗರು ಟೀಕಿಸಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ.


ಫೋಟೋವನ್ನು ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾವಿರಾರು ಕಮೆಂಟ್‌ಗಳು ಬಂದಿವೆ. ಅನೇಕರು ಲೀನಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಳಿ ದೇವಿಯ ಪೋಸ್ಟ‌ ಕಾರಣದಿಂದ ಹೊತ್ತಿಕೊಂಡ ವಿವಾದದ ಬೆಂಕಿಗೆ ಬೇಕೆಂದೇ ತುಪ್ಪ ಸುರಿಯುವ ಉದ್ದೇಶದಿಂದ ಲೀನಾ ಈ ಕೃತ್ಯ ಮಾಡಿದ್ದಾರೆ ಎಂಬುದು ನೆಟ್ಟಗರ ಆರೋಪ.


ಲೀನಾ ಮಣಿಮೇಕಲೈ ಅವರು ಕೆನಡಾದಲ್ಲಿ ವಾಸವಾಗಿದ್ದಾರೆ. ಆದರೆ ಅವರು ಮೂಲತಃ ಭಾರತದವರು. ತಮಿಳುನಾಡಿನವರಾದ ಲೀನಾ ಮಣಿಮೇಕ ಅವರು 1995ರಲ್ಲಿ ಹೋಲಿ ಕ್ರಾಸ್ ಕಾನ್ವೆಂಟ್‌ನಲ್ಲಿ ಪ್ರೌಢ ಶಿಕ್ಷಣ ಪಡೆದರು. ಮದುರೈ ಕಾಮರಾಜರ್ ಯೂನಿವರ್ಸಿಟಿಯಲ್ಲಿ ಅವರು ವಿದ್ಯಾಭ್ಯಾಸ ಮಾಡಿದರು. ‘ದಿ ಸ್ಕೂಲ್ ಆಫ್ ಓರಿಯಂಟಲ್ & ಆಫ್ರಿಕನ್ ಸ್ಟಡೀಸ್’ ಮೂಲಕ ಅವರು 2012ರಲ್ಲಿ ಪದವಿ ಪಡೆದರು. ನಂತರ ಅವರು ಸಿನಿಮಾ ನಿರ್ಮಾಣ ಮತ್ತು ನಿರ್ದೇಶನದಲ್ಲಿ ತೊಡಗಿಕೊಂಡರು.


ಲೀನಾ ಮಣಿಮೇಕಲೈ ಅವರು ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಅದರ ಮೂಲಕ ಹಲವು ಪ್ರಯೋಗಗಳನ್ನು ಅವರು ಮಾಡಿದ್ದಾರೆ. ಅನೇಕ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿ ಅವರು ಗುರುತಿಸಿಕೊಂಡಿದ್ದಾರೆ. ಹಲವಾರು ಚಿತ್ರೋತ್ಸವಗಳಲ್ಲಿ ಅವರ ಡಾಕ್ಯುಮೆಂಟರಿಗಳು ಪ್ರದರ್ಶನ ಆಗಿದ್ದೂ ಅಲ್ಲದೇ ಒಂದಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿವೆ.


ಸಿನಿಮಾ, ಪೇಟಿಂಗ್, ಡಾಕ್ಯುಮೆಂಟರಿ, ವೆಬ್ ಸಿರೀಸ್‌ಗಳಲ್ಲಿ ಹಿಂದೂ ದೇವರನ್ನು ಅವಹೇಳನಕಾರಿಯಾಗಿ ಚಿತ್ರಿಸುವ ಮೂಲಕ ಈಗಾಗಲೇ ಅನೇಕ ನಿರ್ದೇಶಕರು ಹಿಂದೂಗಳ ವಿರೋಧ ಎದುರಿಸಿದ್ದಾರೆ. ಅಂಥವರ ಸಾಲಿಗೆ ಲೀನಾ ಮಣಿಮೇಕಲೈಸೇರ್ಪಡೆ ಆಗಿದ್ದಾರೆ.

- Advertisement -
spot_img

Latest News

error: Content is protected !!