Thursday, June 25, 2026
Homeಕರಾವಳಿಮಂಗಳೂರು: ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿಯರು ಪತ್ತೆ; ಜೋಡಿಗಳು ಪೋಲಿಸರ ವಶಕ್ಕೆ!

ಮಂಗಳೂರು: ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿಯರು ಪತ್ತೆ; ಜೋಡಿಗಳು ಪೋಲಿಸರ ವಶಕ್ಕೆ!

- Advertisement -
- Advertisement -

ಮಂಗಳೂರು: ಬಜರಂಗದಳ ಕಾರ್ಯಕರ್ತರ ಕಾರ್ಯಾಚರಣೆ ವೇಳೆ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿಯರು ಪತ್ತೆಯಾದ ಘಟನೆ ಮಂಗಳೂರು ಹೊರವಲಯದ ಗುರುಪುರದ ಚಿಲಿಂಬಿ ಗುಡ್ಡ ಎಂಬಲ್ಲಿ ನಡೆದಿದೆ.

ಒಬ್ಬ ಹಿಂದೂ ಯುವಕ ಹಾಗೂ ಮುಸ್ಲಿಂ ಯುವಕನೊಂದಿಗೆ ಇಬ್ಬರು ಹಿಂದೂ ಯುವತಿಯರು ಪತ್ತೆಯಾಗಿದ್ದು, ಇವರು ಬಳಸಿದ್ದ ಕಾರ್ ಗೆ ನಂಬರ್ ಪ್ಲೇಟ್ ಇಲ್ಲದಿರುವುದು ಅನುಮಾನ ಮೂಡಿಸಿದೆ. ಪತ್ತೆಯಾದ ನಾಲ್ವರನ್ನೂ ಬಜ್ಪೆ ಪೋಲಿಸ್ ಠಾಣೆಯ ಪೋಲಿಸರಿಗೆ ಒಪ್ಪಿಸಲಾಗಿದೆ.

ಘಟನೆಯ ಹಿಂದೆ ಗಾಂಜಾ ಮಾಫಿಯಾದ ಶಂಕೆ ವ್ಯಕ್ತವಾಗಿದ್ದು, ಉನ್ನತ ತನಿಖೆ ನಡೆಸುವಂತೆ ಬಜರಂಗದಳದ ನಾಯಕರು ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!