Wednesday, June 26, 2024
Homeತಾಜಾ ಸುದ್ದಿಹಿಜಾಬ್ ವಿವಾದ ಹುಟ್ಟು ಹಾಕಿದ್ದೇ ಸಿ.ಎಫ್.ಐ: ಶಾಸಕ ರಘುಪತಿ ಭಟ್

ಹಿಜಾಬ್ ವಿವಾದ ಹುಟ್ಟು ಹಾಕಿದ್ದೇ ಸಿ.ಎಫ್.ಐ: ಶಾಸಕ ರಘುಪತಿ ಭಟ್

spot_img
- Advertisement -
- Advertisement -

ಬೆಂಗಳೂರು: ಹಿಜಾಬ್ ವಿವಾದ ಹುಟ್ಟು ಹಾಕಿದ್ದೇ ಸಿಎಫ್ ಐ ಎಂದು ಶಾಸಕ ರಘುಪತಿ ಭಟ್ ಇಂದು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಖಾದರ್ ಪ್ರಸ್ತಾಪಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ರಘುಪತಿ ಭಟ್ ಪ್ರತಿಕ್ರಿಯೆ ನೀಡಿದ್ದಾರೆ. ಉಡುಪಿಯಲ್ಲಿ ಹಿಜಾಬ್ ವಿವಾದ ಆರಂಭವಾದ ಸಂದರ್ಭದಲ್ಲಿ ಅದನ್ನು ಬಗೆಹರಿಸಲು ನಾವು ಪ್ರಯತ್ನಿಸಿದ್ದೇವೆ.

ಉಡುಪಿಯಲ್ಲಿ ಸಿಎಫ್ ಐ ಹಿಜಾಬ್ ವಿವಾದ ಹುಟ್ಟುಹಾಕಿತ್ತು. ಆ ಸಂದರ್ಭ ಪ್ರಕರಣ ಇತ್ಯರ್ಥಗೊಳಿಸಲು ಪ್ರಯತ್ನಿಸಿದ್ದೇವೆ. ಕಾಂಗ್ರೆಸ್ ನವರೂ ಕೂಡ ನಮಗೆ ಬೆಂಬಲ ನೀಡಿದ್ದಾರೆ. ಆದರೆ, ಸಿಎಫ್ ಐ ಸಂಘಟನೆ ವಿವಾದವನ್ನು ಮತ್ತಷ್ಟು ಹೆಚ್ಚಿಸಿತು. ಆ ಬಳಿಕ ಉಡುಪಿಯಿಂದ ಕುಂದಾಪುರಕ್ಕೂ ವಿವಾದ ವಿಸ್ತರಿಸಿದರು ಎಂದು ಸದನದಲ್ಲಿ ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

- Advertisement -
spot_img

Latest News

error: Content is protected !!