Thursday, June 4, 2026
Homeಕರಾವಳಿಮಂಗಳೂರಿನಲ್ಲಿ ಹೈಪ್ರೊಫೈಲ್ ಗಾಂಜಾ ದಂಧೆಪ್ರಕರಣ;  ಸಿಕ್ಕಿಬಿದ್ದ ಕೆಎಂಸಿ ಆಸ್ಪತ್ರೆಯ ಇಬ್ಬರು ವೈದ್ಯರು ಅಮಾನತು

ಮಂಗಳೂರಿನಲ್ಲಿ ಹೈಪ್ರೊಫೈಲ್ ಗಾಂಜಾ ದಂಧೆಪ್ರಕರಣ;  ಸಿಕ್ಕಿಬಿದ್ದ ಕೆಎಂಸಿ ಆಸ್ಪತ್ರೆಯ ಇಬ್ಬರು ವೈದ್ಯರು ಅಮಾನತು

- Advertisement -
- Advertisement -

ಮಂಗಳೂರಿನಲ್ಲಿ ಹೈಪ್ರೊಫೈಲ್ ಗಾಂಜಾ ದಂಧೆ ಪ್ರಕರಣದಲ್ಲಿ ಸಿಕ್ಕಿ ಬಿದ್ದ  ಇಬ್ಬರು ವೈದ್ಯರನ್ನು ಕೆಎಂಸಿ ಆಸ್ಪತ್ರೆಯ ಆಡಳಿತ ಮಂಡಳಿ ವಜಾ ಮಾಡಿ ಗುತ್ತಿಗೆ ರದ್ದುಪಡಿಸಿದೆ.ಉಳಿದ 7 ವೈದ್ಯಕೀಯ ವಿದ್ಯಾರ್ಥಿಗಳು ಕಾಲೇಜಿನಿಂದ ಅಮಾನತ್ತು ಮಾಡಲಾಗಿದೆ ಎಂದು ಮಂಗಳೂರು ಆಯುಕ್ತರಿಗೆ ಕೆಎಂಸಿ ಡೀನ್‌ ಉನ್ನಿಕೃಷ್ಣನ್‌ ಮಾಹಿತಿ ನೀಡಿದ್ದಾರೆ.

ಮಂಗಳೂರಿನಲ್ಲಿ ಹೈಪ್ರೊಫೈಲ್ ಗಾಂಜಾ ದಂಧೆ ಪ್ರಕರಣ ನಡೆದಿದ್ದು, ವೈದ್ಯರು, ವಿದ್ಯಾರ್ಥಿಗಳು ಸೇರಿ 13 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಬಂಧಿತರ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಹೊರಬಿದ್ದಿದ್ದು, ವಿದ್ಯಾರ್ಥಿನಿಯರು ಮಾದಕ ನಶೆಯ ಚಟಕ್ಕೆ ಬೀಳಲು ಮುಖ್ಯ ಕಾರಣ ಅವರು ಲಿವಿಂಗ್ ಟುಗೆದರ್ ಸಂಬಂಧವನ್ನು ಹೊಂದಿದ್ದರು ಎಂಬುದು ಬಹಿರಂಗವಾಗಿತ್ತು.

ಇವರಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದವರಾಗಿದ್ದು, ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಂಡು ಯುವಕ-ಯುವತಿಯರು ಲಿವಿಂಗ್ ಟುಗೆದರ್ ಎಂದು ಒಟ್ಟಿಗೆ ಇದ್ದರು. ಸೆಕ್ಸ್, ಮಾದಕ ನಶೆಯಲ್ಲಿ ತೇಲಾಡುತ್ತಾರೆ ಎಂಬ ಅಚ್ಚರಿ ಮಾಹಿತಿ ಬಯಲಾಗಿದೆ.
ಮಂಗಳೂರಿನ ಹಲವು ಅಪಾರ್ಟ್ ಮೆಂಟ್ ಗಳಲ್ಲಿ ಲಿವಿಂಗ್ ಟುಗೆದರ್ ಎಂಬ ಹೆಸರಿನಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಒಟ್ಟಾಗಿ ವಾಸ ಮಾಡುತ್ತಿದ್ದು, ಗಾಂಜಾ ನಶೆಯಲ್ಲಿ ತೇಲಾಡಿ..ತಮ್ಮ ಸ್ನೇಹಿತರನ್ನು ಕೂಡ ಇದಕ್ಕೆ ಸೆಳೆಯುತ್ತಿದ್ರು ಎಂಬ ವಿಚಾರ ತನಿಖೆ ವೇಳೆ ಹೊರಬಿದ್ದಿದೆ.

- Advertisement -

Latest News

error: Content is protected !!