ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿಯ ದೀಪಾವಳಿಯ ಬೆಳಕು ಕೊಂಚ ಮಬ್ಬಾಗಿದೆ ಈ ಮಧ್ಯೆ ಸರ್ಕಾರ ದೀಪಾವಳಿಗೆ ಹಲವು ಷರತ್ತು ಬದ್ಧ ಆಚರಣೆಯ ಮಾರ್ಗಸೂಚಿ ಸಿದ್ಧ ಪಡಿಸಿದೆ.ಈಗಾಗಲೇ ತಿಳಿಸಿರುವಂತೆ ‘ಹಸಿರು ಪಟಾಕಿ’ಗಳನ್ನು ಮಾತ್ರ ಮಾರಾಟ ಹಾಗೂ ಬಳಸಬೇಕು.ಕಾರಣ ಹಸಿರು ಪಟಾಕಿಯಲ್ಲಿ ಕಡಿಮೆ ಮಾಲಿನ್ಯ, ಶಬ್ದದ ಪ್ರಮಾಣ ಕಡಿಮೆ ಇರುತ್ತದೆ.ಪಟಾಕಿಯ ಬಾಕ್ಸ್ ಮೇಲೆ ‘ಸಿಎಸ್‌ಐ ಆರ್-ನೀರಿ’ ಮತ್ತು ‘ಪಿಇಎಸ್‌ಒದ ಲೋಗೊ’ ಮತ್ತು ‘ಕ್ಯೂಆರ್ ಕೋಡ್’ ಇರುವುದು ಕಡ್ಡಾಯ. ಈ ಸಂಬಂಧ ಈಗಾಗಲೇ ಹೊರಡಿಸಿರುವ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರ ಆದೇಶಿಸಿದೆ.
ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಬೇಕು ಎಂಬ ಷರತ್ತು ವಿಧಿಸಲಾಗಿದೆ
ಕೌನ್ಸಿಲ್ ಅಫ್ ಸೈಟಿಂಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸಚ್‌ರ್ – ನ್ಯಾಷನಲ್ ಎನ್ವರ್ ಮೆಂಟಲ್ ಅಂಡ್ ಇಂಜಿನಿಯರಿಂಗ್ ರಿಸಚ್‌ರ್ ಇನ್ಸಿಟ್ಯೂಟ್ (ನೀರಿ) ಮಾರ್ಗದರ್ಶಿ ಸೂತ್ರದ ಅನ್ವಯ ಹಸಿರು ಪಟಾಕಿ ತಯಾರಾಗಬೇಕು. ಇದಕ್ಕೆ ಪೆಟ್ರೋಲಿಯಂ ಅಂಡ್ ಎಕ್ಸ್‌ಪ್ಲೊಸೀವ್ ಸೇಫ್ಟಿಸಂಸ್ಥೆ ಪ್ರಮಾಣೀಕರಿಸಿರಬೇಕು.
ಹಸಿರು ಪಟಾಕಿಯು ಸುರ್‌ಸುರ್ ಬತ್ತಿ, ಹೂ ಕುಂಡ ಇತ್ಯಾದಿ ರೂಪದಲ್ಲಿ ಲಭ್ಯವಿದೆ. ಇದು ವಾಯು ಮಾಲಿನ್ಯ ಸೃಷ್ಟಿಸುವುದಿಲ್ಲ ಎಂದು ಸರ್ಕಾರ ತನ್ನ ಆದೇಶದಲ್ಲಿ ವಿವರಿಸಿದೆ.ಹಾಗೆಂದು ಹಸಿರು ಪಟಾಕಿ ಸಂಪೂರ್ಣ ನೈಸರ್ಗಿಕವಲ್ಲ. ಮಕ್ಕಳನ್ನು ಪಟಾಕಿ ಬಳಸುವ ವೇಳೆ ಎಚ್ಚರವಹಿಸುವುದು ಭಾರೀ ಮುಖ್ಯ ಅಲ್ಲದೆ ಹಣತೆಗಳ ಜೊತೆಗಿನ ದೀಪಾವಳಿ ಹಿತಕರ