- Advertisement -


- Advertisement -
ಪುತ್ತೂರು; ಜುಲೈ 18 ರಂದು ಸಂಪಾಜೆಯಲ್ಲಿ ವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತ ನಿಶಾನ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 3 ಲಕ್ಷ ಪರಿಹಾರ ಮಂಜೂರು ಮಾಡಲಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದ ಶಾಸಕರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವಂತೆಯೂ ಮನವಿ ಮಾಡಿದರು. ನಿಶಾನಾ ಳ ಕುಟುಂಬ ಆರ್ಥಿಕವಾಗಿ ತೀರಾ ಬಡವರಾಗಿದ್ದು ಮೃತಳಿಗೆ ಮೂರು ವರ್ಷ ಪ್ರಾಯದ ಮಗುವಿದ್ದು ,ಕುಟುಂಬ ನೊಂದುಕೊಂಡಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ. ಶಾಸಕರ ಮನವಿಯ ಮೇರೆಗೆ ಸಿ ಎಂ ಅವರು ಮೂರು ಲಕ್ಷ ಪರಿಹಾರ ಮೊತ್ತವನ್ನು ಮಂಜೂರುಗೊಳಿಸಿದ್ದು ಕೆಲವೇ ದಿನಗಳಲ್ಲಿ ಈ ಮೊತ್ತ ನಿಶಾನ ಕುಟುಂಬದ ಖಾತೆಗೆ ಜಮೆಯಾಗಲಿದೆ.
- Advertisement -


