ಕೆದಿಲ: ಶ್ರೀ ರಾಮ ಭಜನಾ ಮಂದಿರದಲ್ಲಿ ಸಹಾಯಾಸ್ತ ಕಾರ್ಯಕ್ರಮ ನಡೆಯಿತು. ಕೆದಿಲ ಗ್ರಾಮದ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಧನ ಸಹಾಯದ ನೆರವನ್ನು,ನಮ್ಮ ಗ್ರಾಮದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿ ಸಮಾಜಮುಖಿ ಕೆಲಸ ಕಾರ್ಯವನ್ನು ಮಾಡುವ ನಮ್ಮ ಗ್ರಾಮದ ಹೆಮ್ಮೆಯ ಧನಂಜಯ ಮಿತ್ತಿಲ ಹಾಗೂ ಅವರ ಪತ್ನಿ ಕೆದಿಲ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರು ಶ್ರೀಮತಿ ಜಯಂತಿ ಧನಂಜಯ ಶೆಟ್ಟಿ ಮಿತ್ತಿಲ ಇವರು ಕಳೆದ ಎರಡು ವರ್ಷ ಗಳಿಂದ ಚರಿತ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಈ ವರ್ಷವೂ ಸುಮಾರು 25 ಹೆಚ್ಚು ವಿದ್ಯಾರ್ಥಿ ಗಳಿಗೆ ಆರ್ಥಿಕ ನೆರವಾಗಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಚರಿತ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ವೆಂಕಟೇಶ್ವರ ಪ್ರಸಾದ್ ಎತಡ್ಕ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಪಾರ್ವತಿ ಹಾಗೂ ಟ್ರಸ್ಟಿಯ ಸದಸ್ಯರಾದ ಬಂಗಾರಡ್ಕ ರಾಧಾಕೃಷ್ಣ ಭಟ್. ಅವರ ಧರ್ಮಪತ್ನಿ ಶ್ರೀಮತಿ ಗಾಯತ್ರಿ ಮತ್ತು ಟ್ರಸ್ಟಿನ ಸದಸ್ಯರು ಗಣರಾಜ್ Y. ಮಂಗಳೂರು ಶ್ರೀ ರಾಮ ಭಜನಾ ಮಂದಿರ ಅಧ್ಯಕ್ಷರು ಅಶ್ವಥ್ ಕೇಶವ ಕರಿಮಜಲು ಹಾಗೂ ಚರಿತ ಚಾರಿಟೇಬಲ್ ಟ್ರಸ್ಟ್ ಅನ್ನು ಕೆದಿಲ ಗ್ರಾಮ ಕ್ಕೆ ಪರಿಚಯಿಸಿದ ಧನಂಜಯ ಶೆಟ್ಟಿ ಹಾಗೂ ಅವರ ಧರ್ಮಪತ್ನಿ ಜಯಂತಿ ಶೆಟ್ಟಿ ಕೆದಿಲ ಗ್ರಾಮ ಪಂಚಾಯತ್ ನಾ ಮಾಜಿ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಲ್ಲ ದಾನಗಳಲ್ಲಿ ಶ್ರೇಷ್ಠವಾದದ್ದು ವಿದ್ಯದಾನ ಎಂದರೆ ತಪ್ಪಿಲ್ಲ ಇದು ಒಂದು ಪುಣ್ಯದ ಕೆಲಸ ಹಾಗೂ ಅನಾರೋಗ್ಯ ಪೀಡಿತರಿಗೂ ಆರ್ಥಿಕ ನೆರವನ್ನು ನೀಡಿರುತ್ತಾರೆ.


