Friday, June 27, 2025
Homeಕರಾವಳಿ ಯುದ್ಧ ಭೂಮಿಯಿಂದ ಸುರಕ್ಷಿತವಾಗಿ ಅಮ್ಮನ ಮಡಿಲು ಸೇರಿದ ಹೀನಾ ಫಾತಿಮಾ

 ಯುದ್ಧ ಭೂಮಿಯಿಂದ ಸುರಕ್ಷಿತವಾಗಿ ಅಮ್ಮನ ಮಡಿಲು ಸೇರಿದ ಹೀನಾ ಫಾತಿಮಾ

spot_img
- Advertisement -
- Advertisement -

ಬೆಳ್ತಂಗಡಿ : ಉಕ್ರೇನ್ ಯುದ್ದ ಭೂಮಿಯಲ್ಲಿ ಅನೇಕ ದಿನಗಳಿಂದ ಸಿಲುಕಿದ್ದ ಉಜಿರೆಯ ಟಿ.ಬಿ.ಕ್ರಾಸ್ ನಿವಾಸಿ ಹೀನಾ ಫಾತಿಮಾ ಸುರಕ್ಷಿತವಾಗಿ ಅಮ್ಮನ ಮಡಿಲು ಸೇರಿದ್ದಾರೆ. ಶುಕ್ರವಾರ ರಾತ್ರಿ ಪೋಲೆಂಡ್ ವಿಮಾನ ನಿಲ್ದಾಣದಿಂದ ಹೊರಟು ಶನಿವಾರ ಬೆಳಗ್ಗೆ 7 ಗಂಟೆಗೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು ವಿಶಾಂತ್ರಿ ಬಳಿಕ ರಾತ್ರಿ 10 ಗಂಟೆಗೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದು ನಂತರ ಅಲ್ಲಿಯೇ ವಿಶಾಂತ್ರಿ ಪಡೆದಿದ್ದಾರೆ. ಬಳಿಕ ಭಾನುವಾರ ಬೆಳಗ್ಗೆ 7:20ಕ್ಕೆ  ಹೊರಟು ಮಂಗಳೂರು ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 8:22 ಕ್ಕೆ ಬಂದಿಳಿದ್ದು ನಂತರ ಅವರ ಮಂಗಳೂರಿನಲ್ಲಿರುವ ಸಂಬಂಧಿ ಮನೆಗೆ ತೆರಳಿದ್ರು. ಅಲ್ಲಿ ಆಕೆಗೆ ಅದ್ಧೂರಿ ಸ್ವಾಗತ ದೊರಕಿತು.

 ವೈದ್ಯ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ ಜಾಗದ ಕೇವಲ 100 ಮೀಟರ್ ಅಂತರದಲ್ಲಿ ಹೀನಾ ಫಾತಿಮಾ ಅವರೂ ಬಂಕರ್ ನಲ್ಲಿ ಅಡಗಿಕೊಂಡು ಅಪಾಯದ ಸ್ಥಿತಿಯಲ್ಲಿದ್ದರು.

ಬಾಲ್ಯದಿಂದಲೇ ಪ್ರತಿಭಾವಂತ ವಿದ್ಯಾರ್ಥಿನಿ ಹೀನಾ ಫಾತಿಮಾ

 ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಟಿ.ಬಿ ಕ್ರಾಸ್ ನಿವಾಸಿ ದಿ. ಯಾಸೀನ್ ಮತ್ತು ಶಹನಾ ದಂಪತಿಗೆ ಇಬ್ಬರು ಮಾತ್ರ ಹೆಣ್ಣು ಮಕ್ಕಳಿದ್ದು ತಂದೆ ಈಗಾಗಲೇ ಮೃತರಾಗಿದ್ದು ,  ಹೀನಾ ಅವರ ಅಕ್ಕ ನಿಶಾ ಫಾತಿಮಾ ಅವರು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಪದವಿ ಮುಗಿಸಿ ದುಬಾಯಿಯ ಕಂಪೆನಿಯೊಂದರಲ್ಲಿ ಅಕೌಂಟೆಂಟ್ ಅಗಿ‌ ಕೆಲಸ ಮಾಡುತ್ತಿದ್ದಾರೆ. ಎರಡನೇ ಪುತ್ರಿಯಾದ ಹೀನಾ ಫಾತಿಮಾ ಪ್ರತಿಭಾನ್ವಿತೆಯಾಗಿದ್ದ ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮುಗಿಸಿದ್ದರು. ‌ ಬಳಿಕ ನೀಟ್ ಪರೀಕ್ಷೆಯಲ್ಲಿ ವೈದ್ಯಕೀಯ ಕಲಿಕೆಗೆ ಪ್ರವೇಶಾಹರ್ತೆ ಪಡೆದು ಉಕ್ರೇನ್ ಗೆ ತೆರಳಿದ್ದರು. ಇದೀಗ ಯುದ್ಧಗ್ರಸ್ಥ ಉಕ್ರೇನ್ ನಾಡಿನಲ್ಲಿ ಪ್ರಾಣಾಪಾಯವನ್ನು ಎದುರಿಸಿ ಸುರಕ್ಷಿತವಾಗಿ ತಾಯ್ನಾಡಿಗೆ ಬಂದಿದ್ದಾರೆ.

ಈಗ ಹೀನಾ‌ ಫಾತಿಮಾ ಸುರಕ್ಷಿತವಾಗಿ ವಾಪಸ್ ಭಾರತಕ್ಕೆ ಬಂದಿದ್ದಕ್ಕೆ ಮನೆಯಲ್ಲಿ ಹಾಗೂ ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ.

- Advertisement -
spot_img

Latest News

error: Content is protected !!