Friday, May 17, 2024
Homeತಾಜಾ ಸುದ್ದಿಕರಾವಳಿಯಲ್ಲಿ ಕೋಳಿ ಮಾಂಸ, ಮೊಟ್ಟೆ ದರದಲ್ಲಿ ಭಾರೀ ಇಳಿಕೆ: ಮಾಂಸ ಪ್ರಿಯರಿಗೆ ಡಬಲ್ ಧಮಾಕದ ಖುಷಿ

ಕರಾವಳಿಯಲ್ಲಿ ಕೋಳಿ ಮಾಂಸ, ಮೊಟ್ಟೆ ದರದಲ್ಲಿ ಭಾರೀ ಇಳಿಕೆ: ಮಾಂಸ ಪ್ರಿಯರಿಗೆ ಡಬಲ್ ಧಮಾಕದ ಖುಷಿ

spot_img
- Advertisement -
- Advertisement -

ಕಾಪು: ಕರಾವಳಿಯಲ್ಲಿ 10 ದಿನಗಳ ಹಿಂದೆ ಗಗನಕ್ಕೇರಿದ್ದ ಕೋಳಿ ಮಾಂಸದ ದರ ತೀವ್ರ ಕುಸಿತ ಕಂಡಿದೆ. ಮೊಟ್ಟೆ ಬೆಲೆಯೂ ಇಳಿದಿದ್ದು ಮಾಂಸ ಪ್ರಿಯರು ಢಬಲ್ ಧಮಾಕದ ಖುಷಿ ಪಡುವಂತಾಗಿದೆ.

10 ದಿನಗಳ ಹಿಂದೆ ಮಾರುಕಟ್ಟೆಯಲ್ಲಿ ಬ್ರಾಕ್ಲರ್ ಕೋಳಿ ಮಾಂಸ ಸ್ಕಿನ್‌ಲೆಸ್ ಕೆಜಿಗೆ 240 ರೂ. ಇತ್ತು. ವಿತ್‌ಸ್ಕಿನ್ ಕೆ.ಜಿ.ಗೆ 220 ರೂ. ಹಾಗೂ ಜೀವಂತ ಕೋಳಿ 180 ರೂ. ವರೆಗೆ ಇತ್ತು. ಜು. 24ರಂದು ಸ್ಕಿನ್‌ಲೆಸ್ ಕೆಜಿಗೆ 155 ರೂ. ಇದ್ದರೆ ವಿಶ್‌ಸ್ಕಿನ್ 135 ರೂ. ಆಸುಪಾಸಿನಲ್ಲಿದೆ. ಜೀವಂತ ಕೋಳಿ ಕೆಜಿಗೆ 105 ರೂ. ವರೆಗೆ ಕುಸಿದಿದೆ. 6.50 ರೂ.ಗೆ ಮಾರಾಟವಾಗುತ್ತಿದ್ದ ಮೊಟ್ಟೆ ಮೊಟ್ಟೆಯ ದರವೂ ಇಳಿದಿದ್ದು 5.50 ರೂ.ಗೆ ಇಳಿದಿದೆ. ವಾರದಲ್ಲಿ ಮತ್ತಷ್ಟು ಕುಸಿಯುವ ಸಾಧ್ಯತೆಗಳಿವೆ.

ಬೇಸಗೆಯಲ್ಲಿ ಮದುವೆ, ಕೋಲ, ತಂಬಿಲ ಸಹಿತ ಶುಭ ಕಾರ್ಯಗಳ ಸಂದರ್ಭ ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಿರುವ ಕಾರಣ ದರವೂ ವಿಪರೀತ ಏರಿಕೆಯಾಗುತ್ತದೆ. ಮಳೆಗಾಲ ಆರಂಭಗೊಂಡು ಆಷಾಢ ಬರುತ್ತಿದ್ದಂತೆಯೇ ದರ ಇಳಿಯುವುದು ಸಾಮಾನ್ಯ. ಮುಂದೆ ಶ್ರಾವಣ ಮಾಸ ಬರುವುದರಿಂದ ಇಡೀ ರಾಜ್ಯದಲ್ಲಿ ಕೋಳಿಯ ದರ ಕಡಿಮೆಯಾಗುತ್ತದೆ. ಈಗ ಮಾರುಕಟ್ಟೆಯಲ್ಲಿ ತಾಜಾ ಮೀನು ಕೂಡ ಸಿಗುತ್ತಿರುವುದರಿಂದ ಕೋಳಿ ಮಾಂಸಕ್ಕೆ ಬೇಡಿಕೆ ಕಡಿಮೆ. ದರ ಏರಿಕೆಗೆ ಡಿಸೆಂಬರ್ ವರೆಗೆ ಕಾಯಬೇಕು ಎನ್ನುತ್ತಾರೆ ಕೋಳಿ ವ್ಯಾಪಾರಿಗಳು.

- Advertisement -
spot_img

Latest News

error: Content is protected !!