Wednesday, June 24, 2026
HomeWorldಮಹಾ ಮಳೆಗೆ ನಲುಗಿದ ವಾಣಿಜ್ಯ ನಗರಿ; ಹಲವು ಸ್ಥಳಗಳು ಜಲಾವೃತ 

ಮಹಾ ಮಳೆಗೆ ನಲುಗಿದ ವಾಣಿಜ್ಯ ನಗರಿ; ಹಲವು ಸ್ಥಳಗಳು ಜಲಾವೃತ 

- Advertisement -
- Advertisement -

ಮುಂಬೈ: ವಾಣಿಜ್ಯ ನಗರಿ ಮುಂಬೈ ಭಾರೀ ಮಳೆಗೆ ನಲುಗಿ ಹೋಗಿದ್ದು, ಇಲ್ಲಿನ ಹಲವು ಪ್ರದೇಶಗಳು ಜಲಾವೃತಗೊಂಡಿದೆ.

ರಸ್ತೆಗಳಲ್ಲಿ ಮಳೆ ನೀರು ಹರಿಯುತ್ತಿದ್ದು, ವಾಹನ ಸವಾರರು ಕೂಡ ಪರದಾಡವಂತಾಗಿದೆ. ತಗ್ಗು ಪ್ರದೇಶಗಳಾದ ಅಂಧೇರಿ ಸಬ್‌ ವೇ, ಲೋಖಂಡ್ವಾಲಾ ಕಾಂಪ್ಲೆಕ್ಸ್‌ ಪ್ರದೇಶ ಜಲಾವೃತಗೊಂಡಿದ್ದು, ಮುಂಬೈ ನಗರದ ವಿಲೆ ಪಾರ್ಲೆ ಸಮೀಪದ ವೆಸ್ಟರ್ನ್‌ ಎಕ್ಸ್‌ ಪ್ರೆಸ್‌ ಹೈವೇಯಲ್ಲಿ ಭಾರೀ ಟ್ರಾಫಿಕ್‌ ಜಾಮ್‌ ಆಗಿದ್ದು, ಸಯನ್‌ ಗಾಂಧಿ ಮಾರುಕಟ್ಟೆ ಪ್ರದೇಶ ಜಲಾವೃತಗೊಂಡಿರುವುದಾಗಿ ಬೃಹನ್‌ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಹವಾಮಾನ ಇಲಾಖೆಯು ಚೆಂಬೂರ್‌ ನಲ್ಲಿ ದಾಖಲೆಯ 65 ಮಿಲಿ ಮೀಟರ್‌ ಮಳೆಯಾಗಿದ್ದು, ಶಿವಾಜಿ ನಗರ್‌ ಪ್ರದೇಶದಲ್ಲಿ 50 ಮಿಲಿ ಮೀಟರ್‌ ಮಳೆಯಾಗಿರುವುದಾಗಿ ತಿಳಿಸಿದೆ.

- Advertisement -

Latest News

error: Content is protected !!