Monday, August 3, 2026
Homeಕರಾವಳಿಮಂಗಳೂರುಬೆಳ್ತಂಗಡಿ  ತಾಲೂಕಿನದ್ಯಾಂತ ಮಳೆ ಆರ್ಭಟ; ಲಾಯಿಲ, ಮುಂಡಾಜೆ ಗ್ರಾಮಗಳಿಗೆ ಜಿಲ್ಲಾಧಿಕಾರಿ ದರ್ಶನ್ ಕೆ. ವಿ. ಭೇಟಿ

ಬೆಳ್ತಂಗಡಿ  ತಾಲೂಕಿನದ್ಯಾಂತ ಮಳೆ ಆರ್ಭಟ; ಲಾಯಿಲ, ಮುಂಡಾಜೆ ಗ್ರಾಮಗಳಿಗೆ ಜಿಲ್ಲಾಧಿಕಾರಿ ದರ್ಶನ್ ಕೆ. ವಿ. ಭೇಟಿ

- Advertisement -
- Advertisement -

ಬೆಳ್ತಂಗಡಿ : ತಾಲೂಕಿನದ್ಯಾಂತ ಮಳೆ ಆರ್ಭಟ ಮುಂದುವರಿದಿದ್ದು ಆ. 1 ರಂದು ಸುರಿದ ಕುಂಭದ್ರೋಣ ಮಳೆಗೆ ತಾಲೂಕಿನ ನಾನಾ ಕಡೆಗಳಲ್ಲಿ  ಸಂಪರ್ಕ ಕಡಿತ, ಗುಡ್ಡ ಜರಿತ, ತೋಟ, ಮನೆಗಳು ಜಲಾವೃತಗೊಂಡು ಹಾನಿಯಾದ ಹಿನ್ನಲೆ ದ. ಕ. ಜಿಲ್ಲಾಧಿಕಾರಿ ದರ್ಶನ್ ಕೆ. ವಿ. ಆ. 3 ರಂದು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮ, ಮುಂಡಾಜೆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಲಾಯಿಲ ಗ್ರಾಮದ ಪುತ್ರಬೈಲು ಹಾಗೂ ಗುರಿಂಗಾನ ಪರಿಸರದಲ್ಲಿ 17 ಮನೆಗಳಿಗೆ  ನದಿ ನೀರುನುಗ್ಗಿತ್ತು  ಲಾಯಿಲ ಕಿಲ್ಲೂರು ರಸ್ತೆ ಜಲಾವೃಂತಗೊಂಡು ಸಂಪರ್ಕ ಕಡಿತಗೊಂಡಿತ್ತು. ಈ ಹಿನ್ನಲೆ ಸದ್ರಿ ಸ್ಥಳಕ್ಕೆ ಭೇಟಿ ನೀಡಿದ ಅವರು ಕಿಂಡಿ ಅಣೆಕಟ್ಟನ್ನು ಪರಿಶೀಲನೆ ನಡೆಸಿ ಅಧಿಕಾರಗಳೊಂದಿಗೆ ಮಾಹಿತಿ ಪಡೆದರು.ದೇಶದಲ್ಲಿ ಅತೀ ಹೆಚ್ಚು ಮಳೆಯಾದ ಎರಡನೇ ಸ್ಥಳ ಮುಂಡಾಜೆ ಗ್ರಾಮಕ್ಕೆ ಭೇಟಿ ನೀಡಿ ಮಳೆಯಿಂದ ಹಾನಿಗೀಡಾದ ಪ್ರದೇಶವನ್ನು ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿ ಜೊತೆಯಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಎಸ್.ಎನ್.ನರಗುಂದ, ಬೆಳ್ತಂಗಡಿ ತಾಲೂಕು ಪಂಚಾಯತ್ ಇಒ ಭವನಿಶಂಕರ್, ಬೆಳ್ತಂಗಡಿ ಕಂದಾಯ ನಿರೀಕ್ಷಕ ರಾಜು ಲಮಾಣಿ, ಲಾಯಿಲ ಪಿಡಿಒ ತಾರಾನಾಥ್ ನಾಯ್ಕ್, ಲಾಯಿಲ ಗ್ರಾಮ ಆಡಳಿತಾಧಿಕಾರಿ ರನಿತಾ ಹಾಗೂ ಮತ್ತಿತರ ಅಧಿಕಾರಿಗಳು ಭಾಗಿಯಾಗಿದ್ದರು.

ಜಿಲ್ಲಾಧಿಕಾರಿಯವರು ಅತಿ ಹೆಚ್ಚು ಹಾನಿಗೀಡಾದ ಲಾಯಿಲದಲ್ಲಿ ಕೇವಲ ಎರಡು ಕಿಂಡಿ ಅಣೆಕಟ್ಟುಗಳನ್ನು ಮಾತ್ರ ನೋಡಿ ಹಿಂತಿರುಗಿದರು. ಪ್ರಹಪೀಡಿತ ಮನೆಗಳನ್ನಾಗಲಿ, ಸಂತ್ರಸ್ತರನ್ನಾಗಲಿ ಅವರು ಭೇಟಿಯಾಗಿ ಮಾತಾನಾಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಡಿಸುತ್ತಿದ್ದರು

- Advertisement -

Latest News

error: Content is protected !!