- Advertisement -
![]()
- Advertisement -
ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ.
ಪುತ್ತೂರು ,ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಸಂಜೆ ವೇಳೆ ಗುಡುಗು ಸಹಿತ ಮಳೆಯಾಗಿದೆ.
ಸುಳ್ಯ ತಾಲೂಕಿನ ಕಳಂಜ ಗ್ರಾಮದ ಮಣಿಮಜಲಿನಲ್ಲಿ ತೋಡಿನ ನೀರು ಕೃಷಿ ಭೂಮಿಗೆ ನುಗ್ಗಿದ್ದರಿಂದ ಹಾಗೂ ತೋಟದಲ್ಲಿದ್ದ ಕೆಲವು ಜೇನು ಪೆಟ್ಟಿಗೆಗಳು, ಅಡಿಕೆ ಗಿಡಗಳು ನೀರಿನಲ್ಲಿ ಮುಳುಗಿ ಹಾನಿ ಸಂಭವಿಸಿದೆ.ಉಪ್ಪಳದಲ್ಲಿ ಸಿಡಿಲಿನ ಆಘಾತಕ್ಕೆ ಸೋಂಕಾಲ್‌ನ ಹನೀಫ್ ಅವರ ಮನೆಯ ವಿದ್ಯುತ್ ಉಪಕರಣಗಳು, ಗೃಹೋಪಕರಣಗಳು ಉರಿದು ಹಾನಿಗೀಡಾಗಿವೆ. ಮಂಗಳೂರು, ಬಂಟ್ವಾಳ, ಮೂಡುಬಿದಿರೆ ತಾಲೂಕುಗಳಲ್ಲಿ ಮೋಡ ಕವಿದ ವಾತಾವರಣವಿತ್ತು.
- Advertisement -


