Saturday, June 13, 2026
Homeಕರಾವಳಿಸೌದಿಯಲ್ಲಿ ಕಾರು ಚಲಾಯಿಸುವ ವೇಳೆಯೇ ಹೃದಯಾಘಾತ: ಮೂಲ್ಕಿ ಬಪ್ಪ ಬ್ಯಾರಿ ದೊಡ್ಡಮನೆಯ ಕುಟುಂಬದ ವ್ಯಕ್ತಿ ಮೃತ್ಯು

ಸೌದಿಯಲ್ಲಿ ಕಾರು ಚಲಾಯಿಸುವ ವೇಳೆಯೇ ಹೃದಯಾಘಾತ: ಮೂಲ್ಕಿ ಬಪ್ಪ ಬ್ಯಾರಿ ದೊಡ್ಡಮನೆಯ ಕುಟುಂಬದ ವ್ಯಕ್ತಿ ಮೃತ್ಯು

- Advertisement -
- Advertisement -

ಮೂಲ್ಕಿ: ಸೌದಿ ಅರೇಬಿಯದ ರಿಯಾದ್‌ನಲ್ಲಿ ಮೂಲ್ಕಿ ಮೂಲದ ವ್ಯಕ್ತಿಯೊಬ್ಬ ವಾಹನ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ನಡೆಇದೆ.

ಮೃತಪಟ್ಟವರನ್ನು ಮನ್ಸೂರ್‌ ಮೂಲ್ಕಿ  (41) ಎನ್ನಲಾಗಿದೆ. ಮೃತರು ತಾಯಿ, ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಅವರು ಮೂಲತಃ ಮೂಲ್ಕಿ ಬಪ್ಪ ಬ್ಯಾರಿ ದೊಡ್ಡಮನೆಯ ಕುಟುಂಬದವರು ಎನ್ನಲಾಗಿದೆ.

ಮೂಲ್ಕಿ ಕಾರ್ನಾಡಿನ 7-ಸ್ಟಾರ್‌ ಕ್ರಿಕೆಟ್‌ ತಂಡದ ಹಿರಿಯ ಆಟಗಾರ ಹಾಗೂ ಮಾನೀಷ್‌ ಯೂತ್‌ ಕ್ಲಬ್‌ನ ಸದಸ್ಯರಾಗಿದ್ದ ಅವರು ಸಾವು ಸಂಭವಿಸುವ 15 ನಿಮಿಷದ ಮೊದಲು ಸುಮಾರು ಅರ್ಧ ಗಂಟೆಗಳ ಕಾಲ ಮೊಬೈಲ್‌ನಲ್ಲಿ ತಾಯಿಯ ಜತೆಗೆ ಮಾತನಾಡಿದ್ದರು. ಎಂದು ಮೂಲಗಳು ತಿಳಿಸಿವೆ. 

ಇನ್ನು ಸೌದಿಯಲ್ಲೇ ಅವರ ಅಂತ್ಯಕ್ರಿಯೆ ವಿಧಿವಿಧಾನಗಳು ನಡೆಯಲಿದೆ.

- Advertisement -

Latest News

error: Content is protected !!