- Advertisement -
- Advertisement -
ಬೆಂಗಳೂರು: ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಎರಡೂ ವೇಳೆ ಬಿಡುಗಡೆಯಾಗುತ್ತಿದ್ದ ಕರೊನಾ ಕುರಿತ ಹೆಲ್ತ್ ಬುಲೆಟಿನ್ ಇನ್ಮುಂದೆ ದಿನಕ್ಕೊಂದು ಬಾರಿ ಮಾತ್ರ ಬರಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ತಿಳಿಸಿದ ಸಚಿವರು, ಕೋವಿಡ್ ಟಾಸ್ಕ್ ಫೋರ್ಸ್ ಸಲಹೆಯಂತೆ ಬೆಳಗಿನ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡದಿರಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ. ರಾಜ್ಯದಲ್ಲಿ ಇಂದಿನಿಂದ(ಶನಿವಾರ) ಕೋವಿಡ್-19 ಹೆಲ್ತ್ ಬುಲೆಟಿನ್ ಬೆಳಗಿನ ವೇಳೆ ಪ್ರಕಟವಾಗುವುದಿಲ್ಲ. ಒಟ್ಟಾರೆಯಾಗಿ ಸಂಜೆ ವೇಳೆಯೇ ಬಿಡುಗಡೆ ಆಗಲಿದೆ ಎಂದರು,
- Advertisement -