Monday, May 20, 2024
Homeತಾಜಾ ಸುದ್ದಿಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಬೆಂಗಾವಲು ವಾಹನ ಅಪಘಾತ: ಮೂವರು ಪೊಲೀಸ್​ ಸಿಬ್ಬಂದಿ ಗಾಯ

ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಬೆಂಗಾವಲು ವಾಹನ ಅಪಘಾತ: ಮೂವರು ಪೊಲೀಸ್​ ಸಿಬ್ಬಂದಿ ಗಾಯ

spot_img
- Advertisement -
- Advertisement -

ತುಮಕೂರು: ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿ, ಮೂವರು ಪೊಲೀಸ್​ ಸಿಬ್ಬಂದಿ ಗಾಯಗೊಂಡಿರುವ ಘಟನೆ ತುಮಕೂರಿನ ಕುಣಿಗಲ್ ತಾಲೂಕಿನ ತಿಪ್ಪೂರು ಗೇಟ್ ಬಳಿ ತಡರಾತ್ರಿ ಒಂದು ಗಂಟೆ ಸುಮಾರಿಗೆ ಘಟನೆ ನಡೆದಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಬೆಂಗಾವಲು ವಾಹನ ರಸ್ತೆಯ ತಡೆಗೋಡೆಗೆ ಗುದ್ದಿ ರಸ್ತೆಯಿಂದಾಚೆಗೆ ನುಗ್ಗಿದೆ. ಪರಿಣಾಮ ವಾಹನದಲ್ಲಿದ್ದ ಐವರಲ್ಲಿ ಮೂವರಿಗೆ ಗಾಯಗಳಾಗಿವೆ.

ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೋಲಿಸ್ ಸಿಬ್ಬಂದಿ ಮಹೇಶ್, ಮಂಜುನಾಥ್ ಹಾಗೂ ಆನಂದ್ ಹರೀಶ್​ ಎಂಬುವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಅಮೃತ್ತೂರು ಪೋಲಿಸರು ಭೇಟಿ‌ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

- Advertisement -
spot_img

Latest News

error: Content is protected !!