Thursday, June 4, 2026
HomeUncategorizedಹಾವೇರಿ: ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ,ಮಗಳು!..

ಹಾವೇರಿ: ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ,ಮಗಳು!..

- Advertisement -
- Advertisement -

ಹಾವೇರಿ:ಹಿರೆಕೇರೂರು ಪಟ್ಟಣದ ಹೊರವಲಯದಲ್ಲಿರುವ ದುರ್ಗಾದೇವಿ ಕೆರೆಯಲ್ಲಿ ತಾಯಿ ಮತ್ತು ಮಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.ಮೃತರನ್ನವು ಶಿವಕ್ಕ ಮಲ್ಲೇಶಪ್ಪ ದೊಡ್ಡಮನಿ (36) ಮತ್ತು ಸಂಗೀತಾ ದೊಡ್ಡಮನಿ (16)ಎಂದು ಗುರುತಿಸಲಾಗಿದೆ. ಒಬ್ಬರಿಗೊಬ್ಬರು ಬಟ್ಟೆಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರು ರಟ್ಟಿಹಳ್ಳಿ ತಾಲೂಕಿನ ಕೆಂಚಾಯಿಕೊಪ್ಪ ತಾಂಡಾ ಗ್ರಾಮದ ನಿವಾಸಿಗಳು.ಎರಡು ದಿನಗಳಿಂದ ತಾಯಿ-ಮಗಳು ದೇವಸ್ಥಾನದ ಕೆರೆಯ ಬಳಿ ಸುತ್ತಾಡುತ್ತಿದ್ದರೆಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!