Saturday, June 13, 2026
Homeಕ್ರೀಡೆರಾಮಮಂದಿರದ ಬಗ್ಗೆ ಮೆಚ್ಚುಗೆಯ ಮಾತನಾಡಿದ ಕ್ರಿಕೆಟಿಗನ ಪತ್ನಿಗೆ ಕೊಲೆ, ರೇಪ್ ಬೆದರಿಕೆ

ರಾಮಮಂದಿರದ ಬಗ್ಗೆ ಮೆಚ್ಚುಗೆಯ ಮಾತನಾಡಿದ ಕ್ರಿಕೆಟಿಗನ ಪತ್ನಿಗೆ ಕೊಲೆ, ರೇಪ್ ಬೆದರಿಕೆ

- Advertisement -
- Advertisement -

ಕೋಲ್ಕೊತಾ: ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ, ಪತ್ನಿ ಹಸೀನ್ ಜಹಾನ್ ನಿಂದ ದೂರವಾಗಿದ್ದಾರೆ. ಹಸೀನ್ ಅನೇಕ ಕಾರಣಗಳಿಗೆ ಸುದ್ದಿಯಲ್ಲಿರ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಆಕೆ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ತಾರೆ. ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಾಕಿದ ಪೋಸ್ಟ್ ಈಗ ಸುದ್ದಿಯಲ್ಲಿದೆ.

ಹಸೀನ್ ತನ್ನ ಹಿಂದೂ ಅಭಿಮಾನಿಗಳಿಗೆ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶುಭ ಕೋರಿದ್ದರು. ರಾಮನ ಫೋಟೋ ಹಾಗೂ ರಾಮ ಮಂದಿರದ ಫೋಟೋ ಹಾಕಿರುವ ಹಸೀನ್, ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ದಿನದಂದು ಸಮಸ್ತ ಹಿಂದೂ ಸಮುದಾಯಕ್ಕೆ ಅಭಿನಂದನೆಗಳು ಎಂದು ಪೋಸ್ಟ್ ಹಾಕಿದ್ದಾರೆ.

ಹಸೀನ್ ಈ ಪೋಸ್ಟ್ ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಟ್ರೋಲ್ ಮಾಡಿದ್ದಾರೆ. ಇದ್ರಲ್ಲಿ ರೇಪ್, ಕೊಲೆ ಬೆದರಿಕೆ ಹಾಕಿದವರೂ ಇದ್ದಾರೆ.

- Advertisement -

Latest News

error: Content is protected !!