Saturday, June 6, 2026
Homeತಾಜಾ ಸುದ್ದಿಹಾಸನದಲ್ಲಿ ಮದುವೆಗೆ ಒಪ್ಪದ ಶಾಲಾ‌ ಶಿಕ್ಷಕಿ ಕಿಡ್ನ್ಯಾಪ್ ಪ್ರಕರಣ: ನೆಲ್ಯಾಡಿ ಬಳಿ ಅಪಹರಣಕಾರರನ್ನು ವಶಕ್ಕೆ ಪಡೆದ...

ಹಾಸನದಲ್ಲಿ ಮದುವೆಗೆ ಒಪ್ಪದ ಶಾಲಾ‌ ಶಿಕ್ಷಕಿ ಕಿಡ್ನ್ಯಾಪ್ ಪ್ರಕರಣ: ನೆಲ್ಯಾಡಿ ಬಳಿ ಅಪಹರಣಕಾರರನ್ನು ವಶಕ್ಕೆ ಪಡೆದ ಹಾಸನ ಪೊಲೀಸರು

- Advertisement -
- Advertisement -

ಕಡಬ: ಹಾಸನದಲ್ಲಿ ನಡೆದಿದ್ದ ಶಾಲಾ‌ ಶಿಕ್ಷಕಿ ಕಿಡ್ನ್ಯಾಪ್ ಪ್ರಕರಣವನ್ನು ಪೊಲೀಸರು ಭೇಧಿಸಿದ್ದಾರೆ.

ಕಡಬ ತಾಲೂಕಿನ ನೆಲ್ಯಾಡಿ ಬಳಿ ಅಪಹರಣಕಾರರನ್ನು ಪತ್ತೆ ಹಚ್ಚಿರುವ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿವಾಹ ಮಾಡಿ ಕೊಡಲು ಒಪ್ಪದ ಕಾರಣಕ್ಕೆ ಹಾಸನ ನಗರದ ಹೊರ ವಲಯದ ಬಿಟ್ಟಗೌಡನಹಳ್ಳಿ ಬಳಿ ಖಾಸಗಿ ಶಾಲೆ ಶಿಕ್ಷಕಿಯನ್ನು ರಾಮು ಎಂಬಾತ ಅಪಹರಣ ಮಾಡಿದ್ದನು.

ನೆಲ್ಯಾಡಿ ಬಳಿ ಕಿಡ್ನ್ಯಾಪ್ ಮಾಡಿದ ಆರೋಪಿಗಳನ್ನು ಪತ್ತೆ ಹಚ್ಚಿದ ಹಾಸನ ಪೊಲೀಸರು ವಶಕ್ಕೆ ಪಡೆದು, ಅಪಹರಣಕ್ಕೊಳಗಾದ ಶಾಲಾ ಶಿಕ್ಷಕಿಯನ್ನು ಹಾಸನಕ್ಕೆ ಕರೆದೊಯ್ದಿದ್ದಾರೆ.

ಮದುವೆಗೆ ಒಪ್ಪದ ಅತ್ತೆ ಮಗಳನ್ನು ಸಂಬಂಧಿ ರಾಮು ಎಂಬಾತ ತನ್ನ ಗೆಳೆಯರ ಜೊತೆ ಸೇರಿ ಇನ್ನೋವಾ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿದ್ದನು.

ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು.

- Advertisement -

Latest News

error: Content is protected !!