Sunday, May 5, 2024
Homeಕರಾವಳಿಹಲವು ವರ್ಷಗಳಿಂದ ವಿವಿಧ ಹೆಸರುಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿ; ಬೆಳ್ತಂಗಡಿ ಠಾಣಾ ಪೊಲೀಸರಿಂದ ಪ್ರಕರಣದ ತನಿಖೆ

ಹಲವು ವರ್ಷಗಳಿಂದ ವಿವಿಧ ಹೆಸರುಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿ; ಬೆಳ್ತಂಗಡಿ ಠಾಣಾ ಪೊಲೀಸರಿಂದ ಪ್ರಕರಣದ ತನಿಖೆ

spot_img
- Advertisement -
- Advertisement -

ಬೆಳ್ತಂಗಡಿ: ಪೊಲೀಸ್ ಠಾಣಾ ಅ.ಕ್ರ. 245/1967 u/s 420 IPC ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಕಳೆದ 56 ವರ್ಷಗಳಿಂದ ವಿವಿಧ ಹೆಸರುಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಪ್ರಕರಣವನ್ನು ಬೆಳ್ತಂಗಡಿ ಠಾಣಾ ಪೊಲೀಸರು ಭೇದಿಸಿದ್ದಾರೆ.

ವಿವಿಧ ಹೆಸರುಗಳಿಂದ ತಲೆಮರೆಸಿಕೊಂಡಿದ್ದ C M ರಾಮಯ್ಯ @ C M ಮಾಮು @ C M ಬಿದ್ಧಪ್ಪ, ಪ್ರಾಯ: 33/1967 s/o C A ಮುದ್ಧಪ್ಪ r/o ಮಗ್ಗುಲು, ವಿರಾಜಪೇಟೆ ಎಂಬವರ ಪತ್ತೆಗಾಗಿ ಬೆಳ್ತಂಗಡಿ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಪಿಎಸ್ಐ (L&O) ಧನರಾಜ್ ಟಿ.ಎಂ. ಮತ್ತು ಪಿಎಸೈ(ತನಿಖೆ) ಚಂದ್ರಶೇಖರ್ ಎ ಎಮ್ ರವರ ನೇತೃತ್ವದಲ್ಲಿ ಹೆಚ್. ಸಿ. ಗಂಗಾಧರ್ ಬಿ. ಮತ್ತು ಹೆಚ್ .ಸಿ. ಆಶೋಕ್ ರವರು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ವಿವಿಧ ಕಡೆಗಳಲ್ಲಿ ಸಂಚರಿಸಿದ್ದರು.

ಈ ವೇಳೆಯಲ್ಲಿ ಆರೋಪಿಯ ಮಗ ಮತ್ತು ಪತ್ನಿ ವಾಸ್ತವ್ಯವಿದ್ದ ಮನೆಯನ್ನು ಪತ್ತೆ ಹಚ್ಚಿ ಕೂಲಂಕುಷವಾಗಿ ವಿಚಾರಿಸಲಾಗಿತ್ತು.

ವಿಚಾರಣೆಯ ವೇಳೆಗೆ ಸದ್ರಿ ಸುದೀರ್ಘ ಕಾಲದಿಂದ ತಲೆಮರೆಸಿಕೊಂಡಿದ್ದ ಅಸಾಮಿಯು ದಿನಾಂಕ, 26/11/2019ರಂದು ಮರಣ ಹೊಂದಿರುವುದಾಗಿ ತಿಳಿದು ಬಂದಿರುತ್ತದೆ.

ಸದ್ರಿ ವ್ಯಕ್ತಿಯ ಮರಣದ ಬಗ್ಗೆ ಸೂಕ್ತ ದಾಖಲಾತಿಗಳನ್ನು ಪಡೆದು, 56 ವರ್ಷಗಳಷ್ಟು ಹಳೆಯದಾದ LPC ಪ್ರಕರಣವನ್ನು ಪತ್ತೆ ಹಚ್ಚಿರುತ್ತಾರೆ.

- Advertisement -
spot_img

Latest News

error: Content is protected !!