Tuesday, June 9, 2026
Homeಕರಾವಳಿದನ ತಪ್ಪಿಸಲು ಹೋದ ಆಟೋರಿಕ್ಷಾ ಚಾಲಕ ಅಫಘಾತಗೊಂಡು ರಸ್ತೆಯಲ್ಲಿ ದುರ್ಮರಣ

ದನ ತಪ್ಪಿಸಲು ಹೋದ ಆಟೋರಿಕ್ಷಾ ಚಾಲಕ ಅಫಘಾತಗೊಂಡು ರಸ್ತೆಯಲ್ಲಿ ದುರ್ಮರಣ

- Advertisement -
- Advertisement -

ಭಟ್ಕಳ: ಮಾರುಕೇರಿ ಕೋಟಖಂಡದಲ್ಲಿ ಆಟೋ ರಿಕ್ಷಾ ಚಾಲಕನೋರ್ವ ರಸ್ತೆಗೆ ಅಡ್ಡ ಬಂದ ದನ ತಪ್ಪಿಸಲು ಹೋಗಿ, ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸಾವನಪ್ಪಿರುವ ಘಟನೆ ನಡೆದಿದೆ.

ಮೃತ ಆಟೋ ಚಾಲಕ ನಾಗೇಶ ಕೃಷ್ಣಗೊಂಡ. ಅವರು ಭಟ್ಕಳ ಕಡೆಯಿಂದ ಮಾರುಕೇರಿ ಕಡೆಗೆ ಆಟೋ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ, ಕೊಟಖಂಡ ಸಮೀಪ ರಸ್ತೆಗೆ ಅಡ್ಡ ಬಂದ ದನವನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ.

ಈ ಅಪಘಾತದಲ್ಲಿ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ವೇಳೆ ಗೊರಟೆ ಕ್ರಾಸ್ ಸಮೀಪ ಸಾವನ್ನಪ್ಪಿದ್ದಾರೆ. ಆಟೋ ಹಿಂಬದಿಯಲ್ಲಿದ್ದ ನಾಗರಾಜ ನಾಯ್ಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಗಾಯಾಳು ನಾಗರಾಜ್ ನಾಯ್ಕ ದೂರು ನೀಡಿದ್ದು ಪ್ರಕರಣವನ್ನು ದಾಖಲಿಸಿಕೊಂಡ ಸಿ.ಪಿ.ಐ ಚಂದನಗೋಪಾಲ.ವಿ ತನಿಖೆ ಕೈಗೊಂಡಿದ್ದಾರೆ.

- Advertisement -

Latest News

error: Content is protected !!