Sunday, June 23, 2024
Homeಕರಾವಳಿಮಲೆಕುಡಿಯರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಹರೀಶ್ ಎಳನೀರ್ ಆಯ್ಕೆ

ಮಲೆಕುಡಿಯರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಹರೀಶ್ ಎಳನೀರ್ ಆಯ್ಕೆ

spot_img
- Advertisement -
- Advertisement -

ಬೆಳ್ತಂಗಡಿ; ಇಲ್ಲಿನ ಕೊಯ್ಯೂರು ಗ್ರಾಮದ ಶಿವಗಿರಿಯಲ್ಲಿರುವ ಮಲೆಕುಡಿಯರ ಸಭಾಭವನದಲ್ಲಿ 2022ರ ಆಗಸ್ಟ್ 28ರಂದು ಮಲೆಕುಡಿಯರ ಸಂಘ ದ.ಕ. ಜಿಲ್ಲಾ ಸಮಿತಿಯ 2021-22ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ದ.ಕ. ಜಿಲ್ಲಾ ಸಮಿತಿಯ ಪುನರ್ ರಚನೆಯ ಸಭೆ ನಡೆಯಿತು.

ಬಾಲಕೃಷ್ಣ ಪೊಳಲಿ ನೂತನ ಸಮಿತಿ ರಚನೆಯನ್ನು ನಡೆಸಿಕೊಟ್ಟರು. ಮಲೆಕುಡಿಯರ ಸಂಘ (ರಿ.)ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಹರೀಶ್ ಎಳನೀರು, ಉಪಾಧ್ಯಕ್ಷರಾಗಿ ಮಾಧವ ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿಯಾಗಿ ಜಯೇಂದ್ರ ಎಂ. ನಿಡ್ಲೆ, ಜೊತೆ ಕಾರ್ಯದರ್ಶಿಯಾಗಿ ಲಕ್ಷ್ಮಣ ನೆರಿಯ, ಕೋಶಾಧಿಕಾರಿಯಾಗಿ ಕೃಷ್ಣಪ್ಪ ಪೂರ್ಜೆ, ಸಂಘಟನಾ ಕಾರ್ಯದರ್ಶಿಯಾಗಿ ಯುವರಾಜ್ ವೇಣೂರು, ಸಂಘದ ವಕ್ತಾರರಾಗಿ ಉಮಾನಾಥ್ ಧರ್ಮಸ್ಥಳ, ಸಮಿತಿಯ ಸದಸ್ಯರುಗಳಾಗಿ ರಾಜ್‌ಕಿರಣ್ ಮಂಗಳೂರು, ಕೇಶವ ಸುಳ್ಯ, ರೋಶನ್ ವೇಣೂರು, ಸೇಸಪ್ಪ ಕೊಯ್ಯೂರು, ಸುರೇಶ್ ನಾರಾವಿ, ಜನಾರ್ಧನ್ ಮಾಚಾರು, ಕೇಶವ ಬಳ್ಳಮಂಜ, ಶ್ಯಾಮಲ ನಿಡ್ಲೆ, ವಿನೋದಕುಮಾರಿ  ಪುತ್ತೂರು ಇವರುಗಳನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಮಲೆಕುಡಿಯರ ಸಂಘದ ದ.ಕ. ಜಿಲ್ಲಾಧ್ಯಕ್ಷರಾದ ಶ್ರೀನಿವಾಸ ಸಿ. ಉಜಿರೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಲೆಕುಡಿಯರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀಧರ ಈದು, ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಪೊಳಲಿ ಪಾಲ್ಗೊಂಡಿದ್ದರು. ದ.ಕ. ಜಿಲ್ಲಾ ಸಮಿತಿಯ ತನಿಯಪ್ಪ ಬೆಟ್ಟಂಪಾಡಿ ಉಪಾಧ್ಯಕ್ಷ ರಾಜ್ಯ ಸಮಿತಿಯ ಕೋಶಾಧಿಕಾರಿ ಹಾಗೂ ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷರಾದ ಶಿವರಾಮ ಉಜಿರೆ, ಸುಳ್ಯ ತಾಲೂಕಿನ ಅಧ್ಯಕ್ಷರಾದ ಸುಬ್ಬಪ್ಪ ದೊಡ್ಡತೋಟ ಉಪಸ್ಥಿತರಿದ್ದರು. ಕುಮಾರಿ ಶ್ರಾವ್ಯ, ಸುಕನ್ಯಾ, ಸೌಜನ್ಯಾ, ಶರಣ್ಯ ಪ್ರಾರ್ಥನೆ ಮಾಡಿದರು. ಜಯೇಂದ್ರ ಎಂ. ವರದಿ ವಾಚಿಸಿದರು. ಜಿಲ್ಲಾಧ್ಯಕ್ಷರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿ ಸಭೆಯ ಸರ್ವಾನುಮತದ ಅನುಮೋದನೆಯನ್ನು ಪಡೆದರು.  ಶ್ರಾವ್ಯ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.

ತನಿಯಪ್ಪ ಬೆಟ್ಟಂಪಾಡಿ ಸ್ವಾಗತಿಸಿ, ಬಾಲಕೃಷ್ಣ ಪೊಳಲಿ ಧನ್ಯವಾದ ಸಲ್ಲಿಸಿದರು. ಮಲೆಕುಡಿಯರ ಸಂಘದ ವತಿಯಿಂದ ಸಭೆಗೆ ಆಗಮಿಸಿದ ಎಲ್ಲರಿಗೂ ಉಚಿತವಾಗಿ ವಿವಿಧ ಹಣ್ಣಿನ ಗಿಡಗಳನ್ನು ವಿತರಣೆ ಮಾಡಲಾಯಿತು.

- Advertisement -
spot_img

Latest News

error: Content is protected !!