Thursday, April 25, 2024
Homeತಾಜಾ ಸುದ್ದಿವೈರಲ್ ಆಯ್ತು ನಟಿ  ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಎಂಗೇಜ್ ಮೆಂಟ್ ಫೋಟೋ

ವೈರಲ್ ಆಯ್ತು ನಟಿ  ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಎಂಗೇಜ್ ಮೆಂಟ್ ಫೋಟೋ

spot_img
- Advertisement -
- Advertisement -

ಬೆಂಗಳೂರು; ಸ್ಯಾಂಡಲ್‌ವುಡ್ ನಟಿ  ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಜೋರಾಗಿ ಕೇಳಿ ಬರುತ್ತಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಇಬ್ಬರು ಕೂಡ ಜೊತೆಯಾಗಿದ್ದ ವಿಡಿಯೋ, ಫೋಟೋಗಳು ವೈರಲ್ ಆಗಿತ್ತು. ಇಬ್ಬರೂ ಕೂಡ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮೂಲಕ ಕ್ಲೂ ಬಿಟ್ಟು ಕೊಟ್ಟಿದ್ದರು. ಹೀಗಿರುವಾಗಲೇ ಇಬ್ಬರು ಎಂಗೇಜ್ ಮೆಂಟ್ ಫೋಟೋಗಳು ವೈರಲ್ ಆಗಿವೆ.

ಬೆಂಗಳೂರಿನಲ್ಲಿ ತಮ್ಮ ನಿವಾಸದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ರಿಂಗ್‌ ಬದಲಿಸಿಕೊಂಡಿದ್ದಾರೆ. ಈ ಮೂಲಕ ತಮ್ಮ ಸಂಬಂಧಕ್ಕೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಇನ್ನು ನಿನ್ನೆಯಷ್ಟೇ ಹರಿಪ್ರಿಯಾ ಸಿಂಹದ ಮಡಿಲಲ್ಲಿ ಮಲಗಿರುವ ಮಗುವಿನ ಫೋಟೋವನ್ನ ಜೊತೆ `ಚಿನ್ನ ತೋಳಿನಲ್ಲಿ ಕಂದ ನಾನು’ ಎಂದು ಕ್ರಿಯೇಟಿವ್ ಆಗಿ ಪೋಸ್ಟ್ ಮಾಡಿದ್ದರು, ಈ ಮೂಲಕ ಮದುವೆ ಬಗೆಗಿನ ಸುದ್ದಿ ಬಗ್ಗೆ ಹರಿಪ್ರಿಯಾ, ಪೋಸ್ಟ್ ಮೂಲಕ ಖಚಿತಪಡಿಸಿದ್ದರು. ಅದೇ ರೀತಿಯ ಪೋಸ್ಟ್‌ ವಸಿಷ್ಠ ಕೂಡ ಶೇರ್ ಮಾಡಿ, ಎಂದು ನಿನ್ನ ನೆರಳಾಗಿ ಕಾಯುವೆ ಅಂತಾ ನಟ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಎಂಗೇಜ್‌ಮೆಂಟ್ ವಿಷ್ಯಕ್ಕೆ ಸ್ಪಷ್ಟನೆ ಕೊಟ್ಟಿದ್ದರು. ಇದೀಗ ಇಬ್ಬರ ನಿಶ್ಚಿತಾರ್ಥದ ಫೋಟೋಗಳು ವೈರಲ್ ಆಗಿವೆ.

- Advertisement -
spot_img

Latest News

error: Content is protected !!