- Advertisement -
- Advertisement -
ಆಗ್ರಾ: ಉತ್ತರಪ್ರದೇಶದಲ್ಲಿ ಹಲವು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ ಆಗ್ರಾದ ಫಿರೋಜಾಬಾದ್ ನ ನರ್ಕಿ ಪ್ರದೇಶದಲ್ಲಿ ಹದಿಹರೆಯದ ಬಾಲಕಿಯನ್ನು ಹೊಲಕ್ಕೆ ಎಳೆದೊಯ್ದು 28 ವರ್ಷದ ಯುವಕ ಅತ್ಯಾಚಾರ ಎಸಗಿದ್ದಾನೆ. ಈತ ದೃಶ್ಯಗಳನ್ನು ಚಿತ್ರೀಕರಿಸಿ ಬಾಲಕಿಯನ್ನು ಬ್ಲಾಕ್ಮೇಲ್ ಮಾಡುತ್ತಿದ್ದ ಎಂದು ವರದಿಯಾಗಿದೆ.
ಮೇವು ಸಂಗ್ರಹಿಸಲು ಹೊಲಕ್ಕೆ ಹೋಗಿದ್ದ ಬಾಲಕಿಯನ್ನು ಹೊಲಕ್ಕೆ ಎಳೆದೊಯ್ದ ಆರೋಪಿ ಅತ್ಯಾಚಾರ ಎಸಗಿ ದೃಶ್ಯ ಚಿತ್ರೀಕರಿಸಿ ಬಾಲಕಿಗೆ ಬೆದರಿಕೆ ಹಾಕಿದ್ದಾನೆ.ನಂತರ ವಿಡಿಯೋ ಹರಿಬಿಟ್ಟಿದ್ದು, ವೈರಲ್ ಆಗಿದೆ.ಪೊಲೀಸರು ಪ್ರಕರಣ ಡಾಕ್ಳಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
- Advertisement -