Thursday, April 25, 2024
Homeತಾಜಾ ಸುದ್ದಿಇಂದು ಅಂತರಾಷ್ಟ್ರೀಯ ಪುರುಷರ ದಿನ- ಬನ್ನಿ ನಮ್ಮ ಜೀವನದಲ್ಲಿ ಮುಖ್ಯ ಪಾತ್ರ ವಹಿಸಿದ ಎಲ್ಲಾ ಪುರುಷರಿಗೊಮ್ಮೆ...

ಇಂದು ಅಂತರಾಷ್ಟ್ರೀಯ ಪುರುಷರ ದಿನ- ಬನ್ನಿ ನಮ್ಮ ಜೀವನದಲ್ಲಿ ಮುಖ್ಯ ಪಾತ್ರ ವಹಿಸಿದ ಎಲ್ಲಾ ಪುರುಷರಿಗೊಮ್ಮೆ ವಿಶ್ ಮಾಡೋಣ…

spot_img
- Advertisement -
- Advertisement -

ಮಹಿಳಾ ದಿನ, ಮಹಿಲಾ ಸಬಲೀಕರಣ ಇವೆಲ್ಲದರ ಬಗ್ಗೆ ನಾವು ಓದಿದ್ದೇವೆ ಮತ್ತು ತಿಳಿದುಕೊಂಡಿದ್ದೇವೆ. ಆದರೆ ಇವೆಲ್ಲದರ ಮಧ್ಯೆ ಗಂಡು ಎಂಬ ಜೀವ ಒಂದು ನಮ್ಮ ಶಕ್ತಿಯಾಗಿ ನಮ್ಮ ಬೆನ್ನ ಹಿಂದೆಯೇ ಇದೆ. ಹೆಣ್ಣು ಎಂಬ ಪ್ರಕ್ರತಿ ಪರಿಪೂರ್ಣ ಅನಿಸಿಕೊಳ್ಳುವುದು ಗಂಡಿನ ರಕ್ಷಣೆಯಲ್ಲೇ. ನಮ್ಮ ಸುತ್ತಲೇ ಇದ್ದು ಅಪ್ಪ, ಅಣ್ಣ ,ತಮ್ಮ ಸ್ನೇಹಿತ,ನಲ್ಲನಾಗಿ ಜೊತೆಗಿರುವ ಒಂದಷ್ಟು ಜೀವಗಳಿಗೆ ಇಂದು ಥ್ಯಾಂಕ್ಸ್ ಎನ್ನಲು ಸಮರ್ಪಕ ದಿನ.

ಹೌದು ನವೆಂಬರ್ 19 ರಂದು ಅಂತರಾಷ್ಟ್ರೀಯ ಪುರುಷರ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಪುರುಷರ ಆರೋಗ್ಯದ ಮೇಲೆ ಕೇಂದ್ರೀಕರಿಸಲು, ಮಹಿಳೆಯ ಜೊತೆ ಪುರುಷ ಹೊಂದಿರುವ ಸಂಬಂಧವನ್ನು ಸುಧಾರಿಸಲು ಈ ದಿನ ಬಹಳ ಮಹತ್ವದ್ದು ಎನಿಸಿಕೊಳ್ಳುತ್ತದೆ.ಈ ಬಾರಿ ಪುರುಷರು ಮತ್ತು ಹುಡುಗರಿಗೆ ಉತ್ತಮ ಆರೋಗ್ಯ ಎನ್ನುವ ಥೀಮ್​ ಇಟ್ಟುಕೊಂಡು ಪುರುಷರ ದಿನ ಆಚರಣೆ ಮಾಡಲಾಗುತ್ತಿದೆ.

ಬರಿ ಕೌಟಂಬಿಕ ಜೀವನದಲ್ಲಿ ಮಾತ್ರವಲ್ಲ ಸಾಮಾಜಿಕ ಬದುಕಿನಲ್ಲೂ ಮನೆಯಿಂದ ಹೊರಟ ಹೆಣ್ಣಿಗೆ ಸಮಾಜದೊಳಗೆ ರಕ್ಷಣೆಯಾಗಿ ನಿಲ್ಲಬಲ್ಲ ಪ್ರತಿ ಪುರುಷನಿಗೂ ಈ ದಿನ ಅರ್ಪಣೆ. ಒಂಟಿಯಾಗಿ ರಾತ್ರಿ ನಿಂತಿದ್ದ ಯುವತಿಯನ್ನ ಕ್ಷೇಮವಾಗಿ ಮನೆ ಸೇರಿಸುವ ಆಟೋ ಅಣ್ಣ, ಬಸ್ ಕಿತ್ತಾಟದ ಮಧ್ಯೆ ಗರ್ಭಿಣಿ ಮಹಿಳೆಗೆ ಸೀಟ್ ಬಿಟ್ಟು ಕೊಡುವ ಹುಡುಗ ಇವರೆಲ್ಲ ನಿಜ ಹೀರೋಗಳು.

ಹೆಣ್ಣಿನ ಬದುಕು ಸುಂದರ ವಾಗಿರಲು ಸಾಕಷ್ಟು ಶ್ರಮಿಸಿ ಸಹಕಾರ ನೀಡುವ ಪ್ರತಿ ಹುಡುಗನಿಗೂ ಈ ದಿನ ಅರ್ಪಣೆ. ತನ್ನ ಜೀವಮಾನವೆಲ್ಲ ಹೆಂಡತಿ ಮಕ್ಕಳಿಗಾಗಿ ದುಡಿವ ಆ ಜೀವ ನಿಜವಾಗಿಯೂ ಶ್ರೇಷ್ಠ. ಈ ದಿನದ ಆಚರಣೆಯಲ್ಲಿ ಪುರುಷರು ಮಾಡುವ ತ್ಯಾಗಗಳನ್ನು ನೆನೆಯುವ ಉದ್ದೇಶ ಕೂಡ ಇದೆ. ಎಲ್ಲ ಪುರುಷ ಸಿಂಹಗಳಿಗೆ ಪುರುಷರ ದಿನದ ಶುಭಾಶಯ ಎನ್ನೋಣ ಬನ್ನಿ.

- Advertisement -
spot_img

Latest News

error: Content is protected !!