Saturday, May 11, 2024
Homeಮನರಂಜನೆಸರಿಗಮಪ ಖ್ಯಾತಿಯ ರತ್ನಮ್ಮ ಹಾಗೂ ಮಂಜಮ್ಮರಿಗೆ ನೆರವಾಗಲು ಹಂಸಲೇಖ ಅವರು ಏನ್ ಮಾಡ್ತಿದ್ದಾರೆ ಗೊತ್ತಾ?

ಸರಿಗಮಪ ಖ್ಯಾತಿಯ ರತ್ನಮ್ಮ ಹಾಗೂ ಮಂಜಮ್ಮರಿಗೆ ನೆರವಾಗಲು ಹಂಸಲೇಖ ಅವರು ಏನ್ ಮಾಡ್ತಿದ್ದಾರೆ ಗೊತ್ತಾ?

spot_img
- Advertisement -
- Advertisement -

ಬೆಂಗಳೂರು : ಕನ್ನಡ ಕಿರುತೆರೆಯಲ್ಲಿ ಹಲವು ಪ್ರಥಮ ಮೈಲಿಗಲ್ಲುಗಳನ್ನು ಸಾಧಿಸಿದ ಜೀ಼ ಕನ್ನಡ ಇದೀಗ ಸರಿಗಮಪ ಮಹಾಸಂಚಿಕೆ ಪ್ರಸಾರ ಮಾಡುತ್ತಿದ್ದು ಆಗಸ್ಟ್ 30, 2020ರಂದು ಭಾನುವಾರ ಸಂಜೆ 7.30ರಿಂದ ರಾತ್ರಿ 10.30ವರೆಗೆ ಸತತವಾಗಿ ಪ್ರಸಾರವಾಗಲಿದೆ.

ಕೋವಿಡ್-19ರ ಹಿನ್ನೆಲೆಯಲ್ಲಿ ಜನರು ತಮ್ಮ ಸಂಕಷ್ಟಗಳಿಂದ ಹೊರಬರಲು ಸಂಗೀತ ಮತ್ತು ಹಾಸ್ಯದ ಮೊರೆ ಹೋಗುತ್ತಿದ್ದಾರೆ. ಜನರು ತಮ್ಮ ಸಂಕಷ್ಟ, ಏಕತಾನತೆ, ಖಿನ್ನತೆಗಳನ್ನು ಸಂಗೀತದಿಂದ ಹೊರ ಹಾಕುತ್ತಿದ್ದಾರೆ.

ಅದರಲ್ಲೂ ಭಾನುವಾರ ರಜಾದಿನದಂದು ಸರಿಗಮಪ ಕಾರ್ಯಕ್ರಮಕ್ಕಾಗಿ ಎದುರು ನೋಡುತ್ತಿರುತ್ತಾರೆ. ಈ ನಾಲ್ಕು ವಾರಗಳಲ್ಲಿ ಸರಿಗಮಪ ಸಾಕಷ್ಟು ಮನರಂಜನೆ ನೀಡಿದೆ. ಈ ಹಿನ್ನೆಲೆಯಲ್ಲಿ ರೂಪುಗೊಂಡ ಈ ಮಹಾಸಂಚಿಕೆ ಹಲವು ವಿಶೇಷಗಳನ್ನು ಹೊಂದಿದೆ. ಈ ಸಂಚಿಕೆಯು ಮತ್ತೊಂದು ವಿಶೇಷತೆಯನ್ನು ಹೊಂದಿದ್ದು 2010ರಿಂದ 2020ರ ದಶಕದಲ್ಲಿ ಕನ್ನಡದಲ್ಲಿ ಬಂದ ಸೂಪರ್ ಹಿಟ್ ಗೀತೆಗಳನ್ನು ಪ್ರಸಾರ ಮಾಡಲಿದೆ. ನಿಮ್ಮ ನೆಚ್ಚಿನ ಸರಿಗಮಪ ಸ್ಪರ್ಧಿಗಳು ಈ ಗೀತೆಗಳನ್ನು ಹಾಡಿ ರಂಜಿಸಲಿದ್ದಾರೆ.

ಈ ಸಂಚಿಕೆಯಲ್ಲಿ ವಿಭಿನ್ನ ವೇಷಭೂಷಣ, ಹೊಸರೀತಿಯ ಗಾಯನವನ್ನು ವೀಕ್ಷಕರು ಆನಂದಿಸಬಹುದು. ಲಾಕ್ ಡೌನ್ ನಂತರ ಪ್ರಾರಂಭವಾದ ಭಾರತದ ಮೊಟ್ಟಮೊದಲ ರಿಯಾಲಿಟಿ ಶೋ ಇದಾಗಿದೆ.

ಮಹಾಗುರುಗಳಾದ ಡಾ.ಹಂಸಲೇಖ ಅವರು ಅಂಧ ಗಾಯಕಿಯರಾದ ರತ್ನಮ್ಮ ಹಾಗೂ ಮಂಜಮ್ಮ ಅವರಿಗೆ ನೆರವಾಗಲು ಒಂದು ಮೊಬೈಲ್ ಆರ್ಕೆಸ್ಟ್ರಾ ಆಯೋಜಿಸಲು ಸಜ್ಜಾಗಿದ್ದಾರೆ. ಈಗಾಗಲೇ ಈ ಗಾಯಕರಿಗೆ ಹಲವರು ನೆರವಾಗಿದ್ದು ಹಂಸಲೇಖ ಅವರು ತಮ್ಮ ಸಹಾಯಹಸ್ತ ಚಾಚಿರುವುದು ವಿಶೇಷ.

ರತ್ನಮ್ಮ ಹಾಗೂ ಮಂಜಮ್ಮ ದೇಶಾದ್ಯಂತ ತಮ್ಮ ಸುಮಧುರ ಗಾಯನದಿಂದ ಖ್ಯಾತಿ ಪಡೆದಿದ್ದು ಈಗ ಮತ್ತೆ ಅವರು ತಮ್ಮ ವೀಕ್ಷಕರಿಗೆ ಹೊಸ ರೀತಿಯಲ್ಲಿ ಹಾಡುತ್ತಿದ್ದಾರೆ. ಅವರಿಗೆಂದೇ ವಿಶೇಷ “ರತ್ನಮಂಜರಿ” ಮೊಬೈಲ್ ಆರ್ಕೆಸ್ಟ್ರಾ ಆಯೋಜಿಸುತ್ತಿದ್ದಾರೆ. ಈ ಮಹತ್ತರವಾದ ನೆರವು ಈ ಇಬ್ಬರಿಗೆ ತಮ್ಮ ಗಾಯನವೃತ್ತಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನೆರವಾಗಿದೆ. ಇದಕ್ಕಾಗಿ ಜೀ಼ ಕನ್ನಡ ಆಟೊಮೊಬೈಲ್ ಪ್ರಾಯೋಜಕ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದು ತೆರೆದ ಜೀಪ್ ಅವರಿಗೆ ಕೊಡಿಸಲು ಪ್ರಯತ್ನದಲ್ಲಿದೆ. ಇದರಿಂದ ಅವರು ಕರ್ನಾಟಕದಾದ್ಯಂತ ತಮ್ಮ ಕಾರ್ಯಕ್ರಮ ನೀಡಬಹುದಾಗಿದೆ.

ಈ ಕುರಿತು ಮಾತನಾಡಿದ ಮಹಾಗುರುಗಳಾದ ಹಂಸಲೇಖ, “ರತ್ನಮ್ಮ ಹಾಗೂ ಮಂಜಮ್ಮ ಕನ್ನಡದ ಸೂಪರ್ ಸ್ಟಾರ್ ಗಾಯಕಿಯರು. ಅವರು ಹಿಂದೆ ದೇವಸ್ಥಾನದಲ್ಲಿ ಹಾಡಿ ತಮ್ಮ ಜೀವನೋಪಾಯ ಕಂಡುಕೊಂಡಿದ್ದರು. ಆದರೆ ಅವರಿಗೆ ಈಗ ಜೀ಼ ಕನ್ನಡ ಸರಿಗಮಪದಂತಹ ಬೃಹತ್ ವೇದಿಕೆ ದೊರೆತಿದೆ. ವಿಶ್ವದಾದ್ಯಂತ ಅವರ ಅಭಿಮಾನಿಗಳಿದ್ದಾರೆ. ಅವರ ಜೀವನಶೈಲಿ ಖಂಡಿತಾ ಇದರಿಂದ ಬದಲಾಗಲಿದೆ. ಅವರಿಗೆ ನೆರವಾಗುವ ದೃಷ್ಟಿಯಿಂದ ನಾನು ಮೊಬೈಲ್ ಆರ್ಕೆಸ್ಟ್ರಾ ಆಯೋಜಿಸುವ ಉದ್ದೇಶದಲ್ಲಿದ್ದೇನೆ. ಈ ಮೊಬೈಲ್ ಆರ್ಕೆಸ್ಟ್ರಾವನ್ನು ಪ್ರತಿ ಕನ್ನಡಿಗರೂ ತಮ್ಮ ಊರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಸ್ವಾಗತಿಸುತ್ತಾರೆ ಎಂಬ ನಿರೀಕ್ಷೆ ನನ್ನದು” ಎಂದರು.

- Advertisement -
spot_img

Latest News

error: Content is protected !!