ಬೆಳ್ತಂಗಡಿ: ತಾಲೂಕು ಬಂಟರ ಯಾನೆ ನಾಡವರ ಸಂಘದಿಂದ ಗುಜರಾತ್ ನ ಬರೋಡದ ಉದ್ಯಮಿ ಗುರುವಾಯನಕೆರೆ ಶಶಿಧರ ಶೆಟ್ಟಿ ಅವರು ತಾಲೂಕಿನ 600 ಸಂಕಷ್ಟಕ್ಕೊಳಗಾದ ಬಂಟ ಸಮುದಾಯದ ಕುಟುಂಬಗಳಿಗೆ ದೇಣಿಗೆಯಾಗಿ ನೀಡುತ್ತಿರುವ ಆಹಾರ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಗುರುವಾಯನಕೆರೆ ಬಂಟರ ಭವನದಲ್ಲಿ ಶಾಸಕ ಹರೀಶ್ ಪೂಂಜರಿಂದ ಸಾಂಕೇತಿಕವಾಗಿ ಚಾಲನೆ ನೀಡಿದರು.
ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ತಾಲೂಕು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ, ನಿರ್ದೇಶಕರಾದ ಕೃಷ್ಣ ರೈ, ಪುಷ್ಪರಾಜ ಶೆಟ್ಟಿ, ಪ್ರಕಾಶ್ ಶೆಟ್ಟಿ ನೊಚ್ಚ, ವಿಜಯ ಕೋ ಅಪರೇಟಿವ್ ಸೊಸೈಟಿ ಸಿ.ಇ.ಒ. ಅಜಿತ್ ಕುಮಾರ್, ಬೆಳ್ತಂಗಡಿ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ವಸಂತ ಶೆಟ್ಟಿ, ಸಂಘದ ಪದಾಧಿಕಾರಿಗಳಾದ ಆನಂದ ಶೆಟ್ಟಿ, ಉಮೇಶ್ ಶೆಟ್ಟಿ, ಸುರೇಶ್ ಶೆಟ್ಟಿ ಲಾಲ, ಚಂದ್ರಮೋಹನ್ ರೈ, ಮೀನಾಕ್ಷಿ ಶೆಟ್ಟಿ ಪಡಂಗಡಿ, ಕಿರಣ್ ಕುಮಾರ್, ವೆಂಕಟರಮಣ ಶೆಟ್ಟಿ ಉಜಿರೆ ಮತ್ತಿತರರು ಇದ್ದರು.
ಕಾರ್ಯಕ್ರಮದಲ್ಲಿ ಎಲ್ಲರೂ ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಪಾಡುವ ಮೂಲಕ ಕೊರೊನಾ ಸೋಂಕಿನ ವಿರುದ್ಧ ಸಾಮಾಜಿಕ ಜಾಗೃತಿ ಮೂಡಿಸಿದರು.