Saturday, June 6, 2026
Homeಕರಾವಳಿಮಂಗಳೂರು: ಗುರುಪುರದಲ್ಲಿ ಗುಡ್ಡ ಕುಸಿತ, ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿರುವ ಶಂಕೆ

ಮಂಗಳೂರು: ಗುರುಪುರದಲ್ಲಿ ಗುಡ್ಡ ಕುಸಿತ, ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿರುವ ಶಂಕೆ

- Advertisement -
- Advertisement -

ಬಂಟ್ವಾಳ: ಗುಡ್ಡ ಜರಿದು ಮನೆಗೆ ಬಾರಿ ಹಾನಿಯಾಗಿ ಮಕ್ಕಳಿಬ್ಬರು ಮಣ್ಣಿನ ಅಡಿಯಲ್ಲಿ ಸಿಲುಕಿರುವ ಘಟನೆ ಮಂಗಳೂರಿನ ಗುರುಪುರ ಕೈಕಂಬ ಬಂಗ್ಲಗುಡ್ಡೆಯಲ್ಲಿ ನಡೆದಿದೆ.

ಗುರುಪುರ ಕೈಕಂಬ ಬಾಂಗ್ಲಾಗುಡ್ಡೆ ಯಲ್ಲಿ ಗುಡ್ಡಜರಿದು ಮನೆಗೆ ಬಾರಿ ಹಾನಿ

ಗುರುಪುರ ಕೈಕಂಬ ಬಾಂಗ್ಲಾಗುಡ್ಡೆ ಯಲ್ಲಿ ಗುಡ್ಡಜರಿದು ಮನೆಗೆ ಬಾರಿ ಹಾನಿಇಬ್ಬರು ಮಕ್ಕಳು ಮಣ್ಣಿನ ಅಡಿಯಲ್ಲಿ ಸಿಲುಕಿದ್ದಾರೆ

Posted by Maha Xpress on Sunday, 5 July 2020

ಸುರಿಯುತ್ತಿರುವ ಬಾರಿ ಮಳೆಗೆ ಈ ಅವಘಡ ಸಂಭವಿಸಿದ್ದು, ಗುಡ್ಡೆಯ ಮೇಲಿದ್ದ ತೆಂಗಿನ ಮರಗಳು ಈಗಾಗಲೇ ಕುಸಿದು ಬಿದ್ದಿದೆ. ಸುಮಾರು 200 ರಿಂದ 250 ರಷ್ಟು ಮಂದಿ ಅಲ್ಲಿ ಸ್ಥಳದಲ್ಲಿ ಸೇರಿದ್ದು ಸಾರ್ವಜನಿಕರು ಸ್ಥಳಕ್ಕೆ ಬರದಂತೆ ಪೊಲೀಸರು ತೆರಳಿ ಎಚ್ಚರಿಕೆ ನೀಡಿದ್ದಾರೆ.

ಗುಡ್ಡ ಕುಸಿದಾಗ ಮನೆ ಮಂದಿ ಮನೆಯೊಳಗೆ ಇದ್ದರು ಎನ್ನಲಾಗಿದ್ದು, ಇಬ್ಬರು ಮಕ್ಕಳು ಅವಶೇಷಗಳ ಅಡಿ ಸಿಲುಕಿದ್ದಾರೆ ಎನ್ನಲಾಗಿದೆ. ಉಳಿದವರು ಗುಡ್ಡ ಕುಸಿಯುವ ಶಬ್ದ ಕೇಳಿ ಹೊರಗೆ ಓಡಿ ಬಂದಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳೀಯರು ಮಣ್ಣು ತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಪಂಚಾಯತ್ ಅಧಿಕಾರಿಗಳು ಹಾಗೂ ಪೊಲೀಸರು ದೌಡಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ಘಟ‌ನೆ ಸಂಬಂಧ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತದೆ.

- Advertisement -

Latest News

error: Content is protected !!