Thursday, June 4, 2026
Homeಕರಾವಳಿಮಂಗಳೂರು; ಮೆಹಂದಿ ಕಾರ್ಯಕ್ರಮದ ದಿನ ವರ ನಾಪತ್ತೆ

ಮಂಗಳೂರು; ಮೆಹಂದಿ ಕಾರ್ಯಕ್ರಮದ ದಿನ ವರ ನಾಪತ್ತೆ

- Advertisement -
- Advertisement -

ಮಂಗಳೂರು; ಮದುವೆಗೆ ಮೊದಲ ದಿನ ಮೆಹಂದಿ ಕಾರ್ಯಕ್ರಮದಂದು ವರನೊಬ್ಬ ನಾಪತ್ತೆಯಾಗಿರುವ ಘಟನೆ  ಮಂಗಳೂರಿನ ಕೊಣಾಜೆ ತೌಡುಗೋಳಿ ವರ್ಕಾಡಿ ಎಂಬಲ್ಲಿ ನಡೆದಿದೆ.

ತೌಡುಗೋಳಿ-ವರ್ಕಾಡಿ ದೇವಂದಪಡ್ಪುವಿನ ಉದ್ಯಮಿಯೋರ್ವರ ಸುಪುತ್ರ ಕಿಶನ್ ಶೆಟ್ಟಿ ನಾಪತ್ತೆಯಾದ ವರ.ಕಿಶನ್ ಗೆ ನಾಳೆ ವಿವಾಹವಾಗಬೇಕಾಗಿತ್ತು.ಕಿಶನ್ ಗೆ ಇಂದು ಸಂಜೆ ನಡೆಯಬೇಕಾಗಿದ್ದ ಮೆಹಂದಿ ಶಾಸ್ತ್ರಕ್ಕೆ ಪೋಷಕರು ಸಿದ್ದತೆ ಮಾಡಿಕೊಂಡಿದ್ದರು.

ಕಿಶನ್ ಹಣ್ಣು ಖರೀದಿಗೆಂದು ತೆರಳಿ ಬಳಿಕ ನಾಪತ್ತೆಯಾಗಿದ್ದಾರೆ.ಇದೀಗ ಕುಟುಂಬವನ್ನು ಆತಂಕಕ್ಕೀಡು ಮಾಡಿದೆ.ಕಿಶನ್ ಶೆಟ್ಟಿಗೆ ಜಪ್ಪಿನಮೊಗರಿನಲ್ಲಿರುವ ಕುಟುಂಬವೊಂದರ ಉಪನ್ಯಾಸಕಿಯೊಂದಿಗೆ ವಿವಾಹ ನಿಗದಿಯಾಗಿತ್ತು.ಈ ಕುರಿತು ಕೊಣಾಜೆ ಠಾಣೆಯಲ್ಲಿ ಕಿಶನ್ ತಂದೆ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

- Advertisement -

Latest News

error: Content is protected !!