Saturday, June 28, 2025
Homeತಾಜಾ ಸುದ್ದಿಮುಲ್ಕಿ: ಕೊನೆಗೂ ಈಡೇರಿತು ಬಹುದಿನಗಳ ಕನಸು: ಮಂಗಳೂರು-ಮುಂಬೈ ರೈಲು ನಿಲುಗಡೆಗೆ ಸಿಕ್ತು ಗ್ರೀನ್‌ ಸಿಗ್ನಲ್

ಮುಲ್ಕಿ: ಕೊನೆಗೂ ಈಡೇರಿತು ಬಹುದಿನಗಳ ಕನಸು: ಮಂಗಳೂರು-ಮುಂಬೈ ರೈಲು ನಿಲುಗಡೆಗೆ ಸಿಕ್ತು ಗ್ರೀನ್‌ ಸಿಗ್ನಲ್

spot_img
- Advertisement -
- Advertisement -

ಮುಲ್ಕಿ: ಮುಲ್ಕಿಯ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ. ಬಹುದಿನಗಳ ಕನಸು ಕೊನೆಗೂ ನನಸಾಗ್ತಿದೆ. ನಿನ್ನೆಯಿಂದ ಕೊಂಕಣ ರೈಲ್ವೆಯ ಮಂಗಳೂರು-ಮುಂಬೈ ಎಕ್ಸ್ ಪ್ರೆಸ್ (ಸಿ ಎಸ್ ಟಿ) ರೈಲಿಗೆ ಮುಲ್ಕಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ರೈಲ್ವೆ ಇಲಾಖೆ ಹಸಿರು ನಿಶಾನೆ ತೋರಿಸಿದೆ.

ಇನ್ನು ಮುಲ್ಕಿಯಲ್ಲಿ ರೈಲು ನಿಲುಗಡೆಯಾಗ್ತಿರೋದಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ತಳಿರು-ತೋರಣ ಕಟ್ಟಿ ಸಿಹಿತಿಂಡಿ ವಿತರಿಸಿ ಸೆಲ್ಫಿ ತೆಗೆದು ಸಂಭ್ರಮಿಸಿದರು.

ಇದರಿಂದ ಕಳೆದ ಹಲವಾರು ವರ್ಷಗಳಿಂದ ಮುಲ್ಕಿ, ಕಿನ್ನಿಗೋಳಿ, ಹಳೆಯಂಗಡಿ ಮೂಡಬಿದ್ರೆ, ಕಟೀಲು, ಕಾರ್ಕಳ ಬೆಳ್ಮಣ್ಣು, ಕಡೆಯಿಂದ ದೂರದ ಮುಂಬೈ ಕಡೆಗೆ ಹೋಗುವ ಪ್ರಯಾಣಿಕರಿಗೆ ಹಾಗೂ ಮುಂಬೈನಿಂದ ಬರುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

- Advertisement -
spot_img

Latest News

error: Content is protected !!