Thursday, June 4, 2026
Homeಕರಾವಳಿಮಂಗಳೂರಿನಲ್ಲಿ ಹಸಿರು ಪಟಾಕಿ ಮಾನದಂಡಪಾಲಿಸದ ಅಂಗಡಿಗಳ ಮೇಲೆ ದಾಳಿ- ಪಟಾಕಿ ವಶಕ್ಕೆ ಪಡೆದ ಅಧಿಕಾರಿಗಳು

ಮಂಗಳೂರಿನಲ್ಲಿ ಹಸಿರು ಪಟಾಕಿ ಮಾನದಂಡಪಾಲಿಸದ ಅಂಗಡಿಗಳ ಮೇಲೆ ದಾಳಿ- ಪಟಾಕಿ ವಶಕ್ಕೆ ಪಡೆದ ಅಧಿಕಾರಿಗಳು

- Advertisement -
- Advertisement -

ಮಂಗಳೂರು:ಸರ್ಕಾರದ ಹಸಿರು ಪಟಾಕಿ ಮಾನದಂಡವನ್ನು ಪಾಲಿಸುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಅಧಿಕಾರಿಗಳು ಪಟಾಕಿ ಮಾರಾಟ ಮಾಡುವ ಅಂಗಡಿಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು.ನಿಯಮಮೀರಿ ಮಾನದಂಡವನ್ನು ಪಾಲಿಸದ ಅಂಗಡಿಗಳಿಂದ ಪಟಾಕಿಗಳನ್ನು ವಶಕ್ಕೆ ಪಡೆದುಕೊಂಡರು.

ಈ ಬಾರಿ ಕಡಿಮೆ ಮಾಲಿನ್ಯಕಾರಕವಾಗಿರುವ ಹಸಿರು ಪಟಾಕಿಗಳನ್ನು ಸಿಡಿಯಲು ಮಾತ್ರ ಸರ್ಕಾರ ಅವಕಾಶ ನೀಡಿದೆ. ಕೊರೊನಾ ಸೋಂಕಿನಿಂದ ಬಳಲುತ್ತಿರುವ ಜನರಿಗೆ ಪಟಾಕಿ ಸಿಡಿಯುವುದರಿಂದ ಉಂಟಾಗುವ ವಾಯುಮಾಲಿನ್ಯಹಾನಿಕಾರಕ ಈ ಹಿನ್ನೆಲೆಯಲ್ಲಿ ದೀಪಾವಳಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಿಯಮ ಜಾರಿಯಲ್ಲಿತ್ತು.

ಹಸಿರು ಪಟಾಕಿ ಹೊರತುಪಡಿಸಿ ಇತರ ಪಟಾಕಿಗಳನ್ನು ಮಾರಾಟ ಮಾಡುವ ಮಳಿಗೆಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಪಟಾಕಿ ಮಾರಾಟದ ಬಗ್ಗೆ ಪರಿಶೀಲಿಸಿ ಪಟಾಕಿ ಅಂಗಡಿಗಳಿಗೆ ದಿಢೀರ್‌ ದಾಳಿ ನಡೆಸಿದರು.ಉಳ್ಳಾಲ, ಕೋಟೆಪುರ ಹಾಗು ವಿವಿಧ ಸ್ಥಳಗಳಲ್ಲಿ ಪಟಾಕಿ ಅಂಗಡಿಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದರು.

- Advertisement -

Latest News

error: Content is protected !!