- Advertisement -
- Advertisement -
ಮಂಡ್ಯ: ಮಂಡ್ಯದಲ್ಲಿ ವ್ಯಕ್ತಿಯೊಬ್ಬ ಕ್ಯಾಂಟರ್ ನಲ್ಲಿ ದ್ರಾಕ್ಷಿ ತಂದು ರಸ್ತೆ ಬದಿ ಸುರಿದು ಹೋದ ಘಟನೆ ನಡೆದಿದೆ. ರಸ್ತೆ ಬದಿ ಸುರಿಯಲ್ಪಟ್ಟಿದ್ದ ದ್ರಾಕ್ಷಿಗಾಗಿ ಜನರು ಮುಗಿಬಿದ್ದು ತೆಗೆದುಕೊಂಡು ಹೋಗಿದ್ದಾರೆ.
ಮಂಡ್ಯ ತಾಲೂಕಿನ ವಿ.ಸಿ. ಫಾರಂ ಗೇಟ್ ಬಳಿ ರಸ್ತೆ ಬದಿಯಲ್ಲಿ
ಅನುಮಾನಾಸ್ಪದವಾಗಿ ದ್ರಾಕ್ಷಿ ಸುರಿಯಲ್ಪಟ್ಟಿದೆ.
ಕ್ಯಾಂಟರ್‌ನಲ್ಲಿ ಬಂದ ವ್ಯಕ್ತಿ 80 ಕೆಜಿ ಗೂ ಅಧಿಕ ದ್ರಾಕ್ಷಿ ಸುರಿದು ಹೋಗಿದ್ದಾನೆ ಎಂದು ಹೇಳಲಾಗಿದೆ.
ದ್ರಾಕ್ಷಿ ಬೆಲೆ ಸದ್ಯ ಕೆಜಿಗೆ 70-80 ರೂಪಾಯಿ ಇದ್ದರೂ ರಸ್ತೆಬದಿಯಲ್ಲಿ ಸುರಿದು ಹೋಗಿರುವುದು ಅನುಮಾನ ಮೂಡಿಸಿದೆ.
ಅನುಮಾನದ ನಡುವೆಯೂ ದ್ರಾಕ್ಷಿ ಬಾಚಿಕೊಂಡ ಜನರು ಚೀಲ, ಕವರ್ ಗಳಲ್ಲಿ ದ್ರಾಕ್ಷಿ ತುಂಬಿಕೊಂಡು ಹೋಗಿದ್ದಾರೆ.
- Advertisement -