Sunday, May 5, 2024
Homeತಾಜಾ ಸುದ್ದಿಸೋಮವಾರದಿಂದ ಮದುವೆ ಸಮಾರಂಭಗಳನ್ನು ನಡೆಸೋದಕ್ಕೆ ಸರ್ಕಾರ ಅನುಮತಿ

ಸೋಮವಾರದಿಂದ ಮದುವೆ ಸಮಾರಂಭಗಳನ್ನು ನಡೆಸೋದಕ್ಕೆ ಸರ್ಕಾರ ಅನುಮತಿ

spot_img
- Advertisement -
- Advertisement -

ಬೆಂಗಳೂರು : ನಿನ್ನೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ, ಸಚಿವರು, ಅಧಿಕಾರಿಗಳ ಜೊತೆಗೆ ರಾಜ್ಯದಲ್ಲಿನ ಕೊರೋನಾ ನಿಯಂತ್ರಣ ಕುರಿತಂತೆ ಸಭೆ ನಡೆಯಿತು. ಇಂತಹ ಸಭೆಯಲ್ಲಿ ರಾಜ್ಯದಲ್ಲಿ ಜೂನ್.28ರ ಸೋಮವಾರದಿಂದ ಕಲ್ಯಾಣ ಮಂಟಪ, ಹೋಟೆಲ್‌, ಪಾರ್ಟಿ ಹಾಲ್ ಮತ್ತು ರೆಸಾರ್ಟ್ ಗಳಲ್ಲಿ‌ 40 ಜನ ಕ್ಕೆ ಸೀಮಿತಗೊಳಿಸಿ ವೈಯಕ್ತಿಕ ಪಾಸ್ ಗಳೊಂದಿಗೆ ಮದುವೆ ಸಮಾರಂಭಗಳಿಗೆ ಅನುಮತಿ ನೀಡಲು ತೀರ್ಮಾನಿಸಿದೆ. ಈ ಮೂಲಕ ಮದುವೆ ಸಮಾರಂಭಗಳಿಗೆ ಸರ್ಕಾರ ಅನುಮತಿಸಿದೆ.

ಮುಖ್ಯಮಂತ್ರಿಗಳ ನಿವಾಸದಲ್ಲಿ ಸಚಿವರು ಹಾಗು ಅಧಿಕಾರಿಗಳ ಜೊತೆ ಕೋವಿಡ್ -19 ನಿಯಂತ್ರಣದ ಕುರಿತು ಚರ್ಚೆ ನಡೆಸಿದರು. ಕೋವಿಡ್ 19 ರ ರೂಪಾಂತರಿ ಡೆಲ್ಟಾ ಬಗ್ಗೆ ರಾಜ್ಯದಲ್ಲಿರುವ ಪ್ರಸ್ತುತ ಇರುವ ಪರಿಸ್ಥಿತಿ ಯ ಬಗ್ಗೆ ಪರಾಮರ್ಶೆ ನಡೆಸಲಾಯಿತು. ರಾಜ್ಯದಲ್ಲಿ ಡೆಲ್ಟಾ ವೈರಸ್ ಸಧ್ಯಕ್ಕೆ ಹತೋಟಿಯಲ್ಲಿ ದ್ದು ವೈರಸ್ ಬಗ್ಗೆ ತೀವ್ರ ನಿಗಾ ಇಡಲು ಸೂಚಿಸಲಾಯಿತು.

ಮಹಾರಾಷ್ಟ್ರ ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡೆಲ್ಟಾ ವೈರಸ್ ಕಂಡುಬರುತ್ತಿದೆ ಬಾರ್ಡರ್ ಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಯಿತು. ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವವರ ಬಗ್ಗೆನು ಸಹ ತೀವ್ರ ನಿಗಾ ಇಟ್ಟು ಅವರನ್ನು ಕರೋನ ಟೆಸ್ಟ್ ಗೆ ಒಳಪಡಿಸುವಂತೆ ಸೂಚಿಸಲಾಯಿತು.

ಕೇರಳ ಹಾಗು ಮಹಾರಾಷ್ಟ್ರದಲ್ಲಿ ಎರಡನೇ ಅಲೆಯ ತೀವ್ರತೆ ಕಡಿಮೆಯಾಗದಿರುವ ಆತಂಕ ವ್ಯಕ್ತಪಡಿಸಿ ರಾಜ್ಯದಲ್ಲಿ ಕೋವಿಡ್ ನಿರ್ಬಂಧಗಳನ್ನು ಸಡಿಲಿಗೊಳಿಸಿದರು ಎಚ್ಚರಿಕೆಯಿಂದ ಇರುವಂತೆ ರಾಜ್ಯದ ಜನರಿಗೆ ಮನವಿ ಮಾಡಲಾಯಿತು. ಅಪೌಷ್ಟಿಕತೆ ಇರುವ ಮಕ್ಕಳನ್ನು ಗುರುತಿಸಿ ಅವರಿಗೆ ಸೂಕ್ತ ಪೌಷ್ಟಿಕ ಆಹಾರ ಒದಗಿ ವೈದ್ಯಕೀಯ ‌ನಿಗಾ ವಹಿಸಲು ಸೂಚಿಸಲಾಯಿತು.

ಕಲ್ಯಾಣ ಮಂಟಪ ಹೋಟೆಲ್‌ ಪಾರ್ಟಿ ಹಾಲ್ ಮತ್ತು ರೆಸಾರ್ಟ್ ಗಳಲ್ಲಿ‌ 40 ಜನ ಕ್ಕೆ ಸೀಮಿತಗೊಳಿಸಿ ಅನುಮತಿ ತೆಗೆದುಕೊಂಡು, ವೈಯಕ್ತಿಕ ಪಾಸ್ ಗಳೊಂದಿಗೆ ಸೋಮವಾರದಿಂದ ಜಾರಿಗೆ ಬರುವಂತೆ ಮದುವೆ ಸಮಾರಂಭಗಳಿಗೆ ಅನುಮತಿ ನೀಡಲು ತೀರ್ಮಾನಿಸಲಾಯಿತು.

- Advertisement -
spot_img

Latest News

error: Content is protected !!