Friday, June 5, 2026
Homeತಾಜಾ ಸುದ್ದಿಕೋಲಾರದ ಉದ್ಯಮಿ ಗೋವಿಂದರಾಜುಗೆ ಮಣೆ ಹಾಕಿದ ಜೆಡಿಎಸ್: ಪರಿಷತ್ ಚುನಾವಣೆಗೆ ಟಿಕೆಟ್

ಕೋಲಾರದ ಉದ್ಯಮಿ ಗೋವಿಂದರಾಜುಗೆ ಮಣೆ ಹಾಕಿದ ಜೆಡಿಎಸ್: ಪರಿಷತ್ ಚುನಾವಣೆಗೆ ಟಿಕೆಟ್

- Advertisement -
- Advertisement -

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ದ್ವೈವಾರ್ಷಿಕ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಪಡೆಯುವಲ್ಲಿ ಕೋಲಾರದ ಉದ್ಯಮಿ ನಿಸರ್ಗ ಗೋವಿಂದರಾಜ್ ಸಫಲರಾಗಿದ್ದಾರೆ.

ಟಿ.ಎ.ಶರವಣ ಅವರಿಂದ ತೆರವಾಗುತ್ತಿರುವ ಸ್ಥಾನವನ್ನು ಗೋವಿಂದರಾಜ್ ತುಂಬಲಿದ್ದಾರೆ. ಪಕ್ಷದ ವರಿಷ್ಢ ಎಚ್. ಡಿ‌.ದೇವೇಗೌಡ ಅವರು ಗೋವಿಂದರಾಜ್‌ಗೆ ಬಿ ಫಾರಂ ನೀಡಿದ್ದಾರೆ. ಶರವಣ ಅವರಲ್ಲದೆ, ಕುಪೇಂದ್ರ ರೆಡ್ಡಿ ಮತ್ತು ಕಬಡ್ಡಿ ಬಾಬು ಟಿಕೆಟ್‌ಗಾಗಿ ಭಾರಿ ಪ್ರಯತ್ನ ನಡೆಸಿದ್ದರು.

ಕೋಲಾರ ಜಿಲ್ಲೆಯಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿಪಾಸ್ತಿ ಹೊಂದಿರುವ ಗೋವಿಂದರಾಜು ಪ್ರಸ್ತುತ ಉದ್ಯಮಿಯಾಗಿದ್ದಾರೆ. ಹಲವು ವರ್ಷಗಳಿಂದ ಜೆಡಿಎಸ್ ಪಕ್ಷದ ಬೆನ್ನೆಲುಬಾಗಿ ಇದ್ದುಕೊಂಡು, ಪಕ್ಷದ ಮುನ್ನೆಲೆಗೆ ಬಾರದೆ, ಕಾರ್ಯಕರ್ತನೂ ಆಗದೆ ಸಲಹೆ ಸೂಚನೆ, ಹಾಗು‌ ಆರ್ಥಿಕವಾಗಿ ಜಿಲ್ಲೆಯಲ್ಲಿ ಎಲ್ಲಾ ಮುಖಂಡರಿಗೂ ಬೆಂಬಲ ನೀಡುತ್ತಾ
ಬಂದಿದ್ದಾರೆ.

- Advertisement -

Latest News

error: Content is protected !!