Sunday, June 23, 2024
Homeಕರಾವಳಿಮಂಗಳೂರುಮಂಗಳೂರು ವಿವಿಯ ಘಟಿಕೋತ್ಸವದಲ್ಲಿ ರಾಜ್ಯಪಾಲರದ್ದೇ ದರ್ಬಾರ್; ಗವರ್ನರ್ ವರ್ತನೆಗೆ ತಲೆ ಮೇಲೆ ಕೈ ಹೊತ್ತು ಕುಳಿತ...

ಮಂಗಳೂರು ವಿವಿಯ ಘಟಿಕೋತ್ಸವದಲ್ಲಿ ರಾಜ್ಯಪಾಲರದ್ದೇ ದರ್ಬಾರ್; ಗವರ್ನರ್ ವರ್ತನೆಗೆ ತಲೆ ಮೇಲೆ ಕೈ ಹೊತ್ತು ಕುಳಿತ ಕುಲಪತಿ

spot_img
- Advertisement -
- Advertisement -

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಿನ್ನೆ 42ನೇ ಘಟಿಕೋತ್ಸವ ನಡೆಯಿತು, ಈ ವೇಳೆ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ನಡೆದುಕೊಂಡ ರೀತಿಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ರಾಜ್ಯಪಾಲರ ವರ್ತನೆಗೆ ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ಚಿಂತೆಗೀಡಾಗಿ ತಲೆ ಮೇಲೆ ಕೈಹೊತ್ತು ಕುಳಿತರು.

ಮಂಗಳ ಗಂಗೋತ್ರಿ ಸಭಾಂಗಣದಲ್ಲಿ ಶನಿವಾರ ಕಾರ್ಯಕ್ರಮ ಆರಂಭವಾದ ಕೆಲ ಹೊತ್ತಿನಲ್ಲೇ  ಕಾರ್ಯಕ್ರಮದಲ್ಲಿ ಇದ್ದಕ್ಕಿದ್ದಂತೆ ಕುಲಾಧಿಪತಿಗಳು ಮತ್ತು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಏಕಾಏಕಿ ಕೆಲವು ಬದಲಾವಣೆ ಮಾಡಲು ಆರಂಭಿಸಿದ್ದಾರೆ.ಈ ನಡುವೆ ಸ್ವಾಗತ ಮಾಡಿ ವೇದಿಕೆಯಲ್ಲಿ ಕಲಾಪ ನಡೆಸುತ್ತಿದ್ದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹಣೆಗೆ ಕೈ ಒತ್ತಿ ವೇದಿಕೆ ಯಲ್ಲಿ ದಿಕ್ಕು ತೋಚದಂತೆ ಕೈ ಮೇಲೆ ಹೊತ್ತು ಕುಳಿತ್ರು. ಕುಲಪತಿಗಳು ಚಿಂತೆಗೊಳಗಾಗಿರೋದನ್ನು ರಾಜ್ಯಪಾಲರು ಅವರನ್ನು ಸಮಾಧಾನಪಡಿಸಿದ್ರು. ಬಳಿಕ ಕಾಲಪ ಮುಂದುವರೆಯಿತು.

ರಾಜ್ಯಪಾಲರು, ಕುಲಾಧಿಪತಿಗಳು ವಿಶ್ವವಿದ್ಯಾಲಯದ ಘಟಿಕೋತ್ಸವದ ಪೂರ್ವ ನಿಗದಿತ ಕಲಾಪಗಳನ್ನು ಕಾರ್ಯ ಕ್ರಮ ಆರಂಭಗೊಂಡ ಬಳಿಕ ಏಕಾಏಕಿ ಬದಲಾಯಿಸಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಪಿಎಚ್‌ಡಿ ಪದವೀಧರರಿಗೆ ಪದವಿ ಪ್ರದಾನ ಮಾಡುವ ಕಲಾಪವು ಸಮಾನ್ಯವಾಗಿ ಪ್ರತಿವರ್ಷ ವೈಯುಕ್ತಿಕವಾಗಿ ಕರೆದು ಗೌರವಿಸಿ ಕಳುಹಿಸಲಾಗುತ್ತಿತ್ತು. ಆದರೆ ಈ ನಡುವೆ ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ಎಲ್ಲಾ ಪಿಎಚ್‌ಡಿ ಪದವೀಧರರನ್ನು ತಮ್ಮ ಹಿಂದೆ ವೇದಿಕೆಯಲ್ಲಿ ನಿಲ್ಲಿಸಿ ಫೋಟೋಗೆ ಪೋಸ್ ಕೊಡುವಂತೆ ಮಾಡಿ ಸಾಮೂಹಿಕವಾಗಿ ಪದವಿ ಪ್ರದಾನ ಮಾಡಿರುವುದಾಗಿ ಘೋಷಿಸಿದರು.

ಘಟಿಕೋತ್ಸವದ ಕಲಾಪಗಳ ಬಗ್ಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮುಂಚಿತವಾಗಿ ಸಿಂಡಿಕೇಟ್, ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಅನುಮೋದನೆಯ ಬಳಿಕ ರಾಜ್ಯಪಾಲರ ಗಮನಕ್ಕೆ ಮುಂಚಿತವಾಗಿ ನೀಡಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು ನಡೆದ ಬಳಿಕ ರಾಜ್ಯಪಾಲರು ಕಲಾಪದಲ್ಲಿ ದಿಢೀರ್ ಬದಲಾವಣೆ ಮಾಡಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ ಮತ್ತು ವಿಶ್ವವಿದ್ಯಾಲಯದ ಅಕಾಡೆಮಿಕ್ ಆದ ಕಾರ್ಯಕ್ರಮವನ್ನು ಅದೇ ಶಿಸ್ತಿನಿಂದ ಮಾಡುವ ಹೊಣೆ ಹೊತ್ತ ಕುಲಾಧಿಪತಿಗಳು ಶೈಕ್ಷಣಿಕ ಸಾಧಕರನ್ನು ವೇದಿಕೆಯಲ್ಲಿ ನಡೆಸಿಕೊಂಡ ರೀತಿ ಸಂಘಟಕರನ್ನು ಕೆಲ ಕಾಲ ಚಿಂತೆಗೀಡು ಮಾಡಿತು.ಅಲ್ಲದೇ ಈ ಬಗ್ಗೆ ಹಲವರು ಆಕ್ರೋಶ ಹೊರ ಹಾಕಿದ್ದಾರೆ.

- Advertisement -
spot_img

Latest News

error: Content is protected !!