Friday, April 26, 2024
Homeಉದ್ಯಮಏ.1ರಿಂದ ತಯಾರಾಗುವ ಎಲ್ಲಾ ಕಾರುಗಳ 'ಮುಂದಿನ ಸೀಟ್'ಗಳಿಗೆ 'ಏರ್ ಬ್ಯಾಗ್' ಕಡ್ಡಾಯ

ಏ.1ರಿಂದ ತಯಾರಾಗುವ ಎಲ್ಲಾ ಕಾರುಗಳ ‘ಮುಂದಿನ ಸೀಟ್’ಗಳಿಗೆ ‘ಏರ್ ಬ್ಯಾಗ್’ ಕಡ್ಡಾಯ

spot_img
- Advertisement -
- Advertisement -

ನವದೆಹಲಿ: 2021 ರ ಏಪ್ರಿಲ್ 1 ರಿಂದ ತಯಾರಾಗುವ ಎಲ್ಲಾ ಹೊಸ ಮಾದರಿಯ ಕಾರ್ ಗಳ ಮುಂಭಾಗದ ಡ್ರೈವರ್ ಸೀಟ್ ಪಕ್ಕದ ಸೀಟ್ ಗೂ ಏರ್ ಬ್ಯಾಗ್ ಅಳವಡಿಕೆ ಕಡ್ಡಾಯಗೊಳಿಸಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು ಮಹತ್ವದ ಕ್ರಮ ಕೈಗೊಂಡಿದ್ದು, ಚಾಲಕನ ಪಕ್ಕದಲ್ಲಿ ವಾಹನದ ಮುಂಭಾಗದ ಸೀಟಿನಲ್ಲಿ ಕುಳಿತಿರುವ ಪ್ರಯಾಣಿಕರಿಗೆ ಏರ್‌ಬ್ಯಾಗ್ ಒದಗಿಸುವುದನ್ನು ಕಡ್ಡಾಯಗೊಳಿಸಲು ಪ್ರಸ್ತಾಪಿಸಲಾಗಿದೆ.

2019 ರ ಜುಲೈ 1 ರಿಂದ ಜಾರಿಗೆ ಬರುವಂತೆ ಎಲ್ಲಾ ಕಾರ್ ಗಳಲ್ಲಿ ಡ್ರೈವರ್ ಸೀಟ್ ಗೆ ಏರ್ ಬ್ಯಾಗ್ ಅಳವಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಅಲ್ಲದೇ ಈಗಿರುವ ಎಲ್ಲಾ ಮಾದರಿಯ ಕಾರುಗಳ ಮುಂದಿನ ಸೀಟ್ ಗಳಿಗೆ ಏರ್ ಬ್ಯಾಗ್ ಅಳವಡಿಸಿಕೊಳ್ಳಲು ಜೂನ್ 1, 2021ರವರೆಗೆ ಡೆಡ್ ಲೈನ್ ನೀಡಲಾಗಿದೆ.

ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ವಾಹನ ಮಾನದಂಡಗಳ ಉನ್ನತ ತಾಂತ್ರಿಕ ಸಮಿತಿ ಅನುಮೋದನೆ ನೀಡಿದೆ. ವಾಹನಗಳಿಗೆ ಸುರಕ್ಷತೆ ವೈಶಿಷ್ಟಗಳನ್ನು ಅಳವಡಿಸುವ ಕುರಿತಾಗಿ ಚರ್ಚೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್ ಗೆ ತಿದ್ದುಪಡಿ ತರಲು ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!